ತಿರುವನಂತಪುರಂ: ಕೋಟ್ಯಂತರ ರೂಪಾಯಿ ಖರ್ಚು ಮಾಡುವ ನವಕೇರಳ ಸಮಾವೇಶ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಂತೆಯೇ ಪಿಂಚಣಿ ಬಾಕಿ ಹಾಗೂ ಸಾರ್ವಜನಿಕ ಹೋಟೆಲ್ ನ ಬಾಕಿ ಹಣ ಬಿಡುಗಡೆಯಾಗಿದೆ.
ನಾಲ್ಕು ತಿಂಗಳ ಕಲ್ಯಾಣ ಪಿಂಚಣಿ ಬಾಕಿಯ ಪೈಕಿ ಜುಲೈ ತಿಂಗಳ ವರೆಗಿನ ಮೊತ್ತ ಮಾತ್ರ ಮಂಜೂರಾಗಿದೆ. ತೀವ್ರ ಆರ್ಥಿಕ ಬಿಕ್ಕಟ್ಟು ಇದೆ ಎಂದು ಹೈಕೋರ್ಟ್‍ಗೆ ತಿಳಿಸಿ ಬಳಿಕ ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲ್ ನಿದ್ದೆಗೆ ಜಾರಿದ್ದರು. ರಾಜ್ಯದಲ್ಲಿ ಯಾವುದೇ ಗಂಭೀರ ಆರ್ಥಿಕ ಬಿಕ್ಕಟ್ಟು ಇಲ್ಲ ಎಂಬುದು ಹಣಕಾಸು ಸಚಿವರ ಹೊಸ ವಿವರಣೆ.
ನವ ಕೇರಳ ಸಮಾವೇಶದಲ್ಲಿ ಕಲ್ಯಾಣ ಪಿಂಚಣಿ ಬಗ್ಗೆ ಜನರು ವಿವರಣೆ ಕೇಳಿಯಾರೆಂದು ಆತಂಕದಲ್ಲಿ ಜನರಿಗೆ ನೇರವಾಗಿ ಯೋಜನೆಗಳ ಬಾಕಿ ಪಾವತಿಸಲು ನಿನ್ನೆಯಿಂದ ಕ್ರಮ ಪ್ರಾರಂಭವಾಯಿತು. ಕಲ್ಯಾಣ ಪಿಂಚಣಿಗೆ 667 ಕೋಟಿ ಮೀಸಲಿಡಲಾಗಿದೆ. ನಾಲ್ಕು ತಿಂಗಳ ಬಾಕಿ ಇದ್ದಾಗ ಒಂದು ತಿಂಗಳ ಮೊತ್ತ ನೀಡಿ ಕೈತೊಳೆಯಲಾಗಿದೆ. ತೀವ್ರ ವಿರೋಧದ ನಡುವೆ ಕುಟುಂಬಶ್ರೀ ಜನಪ್ರಿಯ ಹೋಟೆಲ್‍ಗಳ ಬಾಕಿಯ ಒಂದು ಭಾಗವನ್ನು ಸಹ ಮಂಜೂರು ಮಾಡಲಾಯಿತು. ಡಿಸೆಂಬರ್ 2022 ರಿಂದ ಆಗಸ್ಟ್ 2023 ರವರೆಗೆ ಬಾಕಿ ಇರುವ 41.09 ಕೋಟಿ ರೂಪಾಯಿಗಳಲ್ಲಿ ಕೇವಲ 33.6 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ರೈತರ ಆತ್ಮಹತ್ಯೆ ಮತ್ತು ಭತ್ತ ಸಂಗ್ರಹದ ಮೊತ್ತವನ್ನು ಪಾವತಿಸದ ವಿವಾದದಿಂದಾಗಿ ಭತ್ತ ಸಂಗ್ರಹಣೆಗೆ 200 ಕೋಟಿ ರೂ.ಬಾಕಿಯಿದೆ.
10 ವರ್ಷ ಪೂರೈಸಿದ ಅಂಗನವಾಡಿ ಕಾರ್ಯಕರ್ತರಿಗೆ ಸಾವಿರ ರೂ. ಹತ್ತು ವರ್ಷದೊಳಗಿನವರಿಗೆ 500 ರೂ. ಮತ್ತು ಆಶಾ ಕಾರ್ಯಕರ್ತೆಯರಿಗೆ 1000 ರೂ. ನೀಡಲಾಗುವುದೆಂದೂ ಸರ್ಕಾರ ವಾಗ್ದಾನ ನೀಡಿತ್ತು.ಹಸಿ ತೆಂಗಿನಕಾಯಿ ಖರೀದಿಗೆ ಸಹಾಯಧನ ವಿತರಿಸಲು 12.5 ಕೋಟಿ ರೂ.ನೀಡಲಾಗಿದೆ.
ಕಲ್ಯಾಣ ಪಿಂಚಣಿ ಸಿಗದ ಕಾರಣ ರಾಜ್ಯದ ಹಲವೆಡೆ ವೃದ್ಧರು ಪರದಾಡುವಂತಾಯಿತು. ಜನಪ್ರಿಯ ಹೋಟೆಲ್ ನಡೆಸುತ್ತಿದ್ದ ಕುಟುಂಬಶ್ರೀ ತಂಡಗಳು ಮುಷ್ಕರ ಹೂಡಿದವು. ರೈತರ ಆತ್ಮಹತ್ಯೆಯೂ ಹೆಚ್ಚಿದೆ. ನವಕೇಳ ಸಮಾವೇಶಕ್ಕೆ ಹಿನ್ನಡೆಯಾಗಲಿದೆ ಎಂದು ಅಂದಾಜಿಸಿದಾಗ ಇμÉ್ಟಲ್ಲ ಹಣ ಬಿಡುಗಡೆಮಾಡಲಾಗಿದೆ.