ತಿರುವನಂತಪುರಂ: ರಾಜ್ಯದಲ್ಲಿ ಐದು ವರ್ಷಗಳಲ್ಲಿ 69 ಮಂದಿ ಪೋಲೀಸರು ಪ್ರಾಣ ಕಳೆದುಕೊಂಡಿದ್ದಾರೆ. ಆತ್ಮಹತ್ಯೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸ್ವತಃ ಪೋಲೀಸರೇ ಸಿದ್ಧಪಡಿಸಿರುವ ವರದಿಯಲ್ಲಿ ಇದು ಬಹಿರಂಗಗೊಂಡಿದೆ. 12 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದೂ ಉಲ್ಲೇಖಿಸಲಾಗಿದೆ.
ಈ ಸಂಖ್ಯೆಯ ಆತ್ಮಹತ್ಯೆಗಳು ಜನವರಿ 2019 ರಿಂದ ಸೆಪ್ಟೆಂಬರ್ 2023 ರವರೆಗಿನ ಐದು ವರ್ಷಗಳ ಅವಧಿಯಲ್ಲಿ ನಡೆದಿವೆ. 32 ಸಿವಿಲ್ ಪೋಲೀಸ್ ಅಧಿಕಾರಿಗಳು, 16 ಹಿರಿಯ ಸಿವಿಲ್ ಪೋಲೀಸ್ ಅಧಿಕಾರಿಗಳು, ಎಂಟು ಗ್ರೇಡ್ ಎಸ್‍ಐಗಳು ಮತ್ತು ಇನ್‍ಸ್ಪೆಕ್ಟರ್ ಪ್ರಾಣ ಕಳೆದುಕೊಂಡಿದ್ದಾರೆ.
ಅತಿಯಾದ ಕೆಲಸದ ಹೊರೆ, ಮೇಲಧಿಕಾರಿಗಳ ಬೆದರಿಕೆ ಮತ್ತು ಕೌಟುಂಬಿಕ ಸಮಸ್ಯೆಗಳೇ ಹೆಚ್ಚಿನ ಸಾವುಗಳಿಗೆ ಕಾರಣ. 2023 ರಲ್ಲಿ, ಸೆಪ್ಟೆಂಬರ್ ವರೆಗೆ ಐದು ಜನರು ಆತ್ಮಹತ್ಯೆಗೆ ಯತ್ನಿಸಿದರು. 2020 ಮತ್ತು 21ರಲ್ಲಿ ತಲಾ ಇಬ್ಬರು ಹಾಗೂ 2022ರಲ್ಲಿ ಮೂವರು ಪೆÇಲೀಸರು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರಲ್ಲಿ ಆರು ಮಂದಿ ಹಿರಿಯ ಸಿಪಿಒಗಳು ಮತ್ತು ಉಳಿದವರು ಸಿವಿಲ್ ಪೋಲೀಸ್ ಅಧಿಕಾರಿಗಳು.