HEALTH TIPS

ಬಿಹಾರದಲ್ಲಿ ಹಲವರ ಮಾಸಿಕ ಆದಾಯ ₹6 ಸಾವಿರಕ್ಕಿಂತ ಕಡಿಮೆ; ಜಾತಿಗಣತಿ ವರದಿ

             ಟ್ನಾ: ಬಿಹಾರದಲ್ಲಿ ವಾಸಿಸುವ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಕುಟುಂಬಗಳು ಬಡತನದಲ್ಲಿ ವಾಸಿಸುತ್ತಿದ್ದು, ಮಾಸಿಕ ₹6,000 ಅಥವಾ ಅದಕ್ಕಿಂತ ಕಡಿಮೆ ಆದಾಯವನ್ನು ಹೊಂದಿವೆ ಎಂದು ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಜಾತಿ ಗಣತಿಯ ವಿವರವಾದ ವರದಿಯಲ್ಲಿ ಹೇಳಲಾಗಿದೆ.

               ರಾಜ್ಯದಲ್ಲಿ 2.97 ಕೋಟಿ ಕುಟುಂಬಗಳಿದ್ದು ಅದರಲ್ಲಿ 94 ಲಕ್ಷಕ್ಕೂ ಹೆಚ್ಚು (ಶೇಕಡಾ 34.13) ಕುಟುಂಬ ಬಡತನದಲ್ಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ವಿಜಯ್‌ ಕುಮಾರ್ ಚೌದರಿ ವರದಿಯಲ್ಲಿನ ಮಾಹಿತಿಯನ್ನು ತಿಳಿಸಿದ್ದಾರೆ.

               ಮುಖ್ಯವಾದ ಅಂಶವೆಂದರೆ, ಉತ್ತಮ ಶಿಕ್ಷಣ ಮತ್ತು ಜೀವನೋಪಾಯಕ್ಕಾಗಿ 50 ಲಕ್ಷಕ್ಕೂ ಹೆಚ್ಚು ಬಿಹಾರದ ಜನರು ರಾಜ್ಯದಿಂದ ಹೊರಗುಳಿದಿದ್ದಾರೆ. ಅಂಥವರಲ್ಲಿ ಸುಮಾರು 46 ಲಕ್ಷ ಜನ ಬೇರೆ ರಾಜ್ಯಗಳಲ್ಲಿ ಹಾಗೂ 2.17 ಲಕ್ಷ ಜನ ವಿದೇಶದಲ್ಲಿ ಉದ್ಯೋಗಕ್ಕಾಗಿ ವಾಸಿಸುತ್ತಿದ್ದಾರೆ.

5.52 ಲಕ್ಷ ಜನ ಬೇರೆ ರಾಜ್ಯಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, 27 ಸಾವಿರ ಜನ ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

                     ವರದಿಯ ಪ್ರಕಾರ, ಶೇ 25ರಷ್ಟು ಮೇಲ್ಜಾತಿಯ ಜನ ಬಡತನದಲ್ಲಿದ್ದಾರೆ. ಹೀಗಾಗಿ ವರದಿಯು ಮೇಲ್ಜಾತಿ ವರ್ಗದವರಲ್ಲಿ ಗಣನೀಯ ಬಡತನ ಇದೆ ಎಂದು ಒಪ್ಪಿಕೊಂಡಿದೆ. ಆದರೂ ಶೇಕಡಾವಾರು ಅಂಕಿಅಂಶದಲ್ಲಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರಲ್ಲಿ ಬಡತನ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ ಎಂದು ಸಚಿವರು ವಿವರಿಸಿದರು.

                  ಜಾತಿ ಗಣತಿಯ ಪ್ರಾಥಮಿಕ ಫಲಿತಾಂಶಗಳನ್ನು ಅಕ್ಟೋಬರ್ 2 ರಂದು ಬಿಡುಗಡೆ ಮಾಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries