ರಾಯಪುರ: ಛತ್ತೀಸಗಢ ಮತ್ತು ಮಿಜೋರಾಂ ವಿಧಾನಸಭೆಗೆ ಮಂಗಳವಾರ ಮತದಾನ ನಡೆದಿದ್ದು ಉಭಯ ರಾಜ್ಯಗಳಲ್ಲಿ 5 ಗಂಟೆ ವೇಳೆಗೆ ಶೇ.72 ರಷ್ಟು ಮತದಾನ ನಡೆದಿದೆ.
ರಾಯಪುರ: ಛತ್ತೀಸಗಢ ಮತ್ತು ಮಿಜೋರಾಂ ವಿಧಾನಸಭೆಗೆ ಮಂಗಳವಾರ ಮತದಾನ ನಡೆದಿದ್ದು ಉಭಯ ರಾಜ್ಯಗಳಲ್ಲಿ 5 ಗಂಟೆ ವೇಳೆಗೆ ಶೇ.72 ರಷ್ಟು ಮತದಾನ ನಡೆದಿದೆ.
ಮತದಾನಕ್ಕೆ 5,304 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಸಣ್ಣ ಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಚುನಾವಣೆ ಶಾಂತಿಯುತವಾಗಿ ನಡೆಯಿತು. ನಕ್ಸಲ್ ಪ್ರದೇಶಗಳಲ್ಲಿ ಮತದಾನ ನಡೆದಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಮಿಜೋರಾಂ ವಿಧಾನಸಭೆಯ 40 ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಂಜೆ 5 ಗಂಟೆ ಸುಮಾರಿಗೆ ಶೇ.73 ರಷ್ಟು ಮತದಾನ ನಡೆದಿದೆ ಎಂದು ಚುನಾವಣೆ ಅಧಿಕಾರಿಗಳು ಹೇಳಿದ್ದಾರೆ.
ಮತದಾನಕ್ಕೆ 1,276 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಸಣ್ಣ ಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಚುನಾವಣೆ ಶಾಂತಿಯುತವಾಗಿ ನಡೆಯಿತು. ಆಡಳಿತಾರೂಢ ಮಿಜೊ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್), ವಿರೋಧ ಪಕ್ಷ ಝೆಡ್‌ಪಿಎಂ 40 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಜೆಪಿ ಮತ್ತು ಎಎಪಿ ಕ್ರಮವಾಗಿ 23 ಮತ್ತು 4 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.
ಮತದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.