ಕೀವ್: ರಷ್ಯಾ ಸೇನೆ ಶನಿವಾರ ಸುದೀರ್ಘ ಅಂತರದ ನಂತರ ಏಕಕಾಲಕ್ಕೆ 75 ಡ್ರೋನ್‌ಗಳಿಂದ ಉಕ್ರೇನ್‌ನ ಮೇಲೆ ದಾಳಿ ನಡೆಸಿದೆ. ಈ ಪೈಕಿ 74 ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಸೇನೆ ತಿಳಿಸಿದೆ.
ಕೀವ್: ರಷ್ಯಾ ಸೇನೆ ಶನಿವಾರ ಸುದೀರ್ಘ ಅಂತರದ ನಂತರ ಏಕಕಾಲಕ್ಕೆ 75 ಡ್ರೋನ್‌ಗಳಿಂದ ಉಕ್ರೇನ್‌ನ ಮೇಲೆ ದಾಳಿ ನಡೆಸಿದೆ. ಈ ಪೈಕಿ 74 ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಸೇನೆ ತಿಳಿಸಿದೆ.
ರಷ್ಯಾ ಸೇನೆಯು ದಾಖಲೆ ಸಂಖ್ಯೆಯಲ್ಲಿ ಇರಾನ್ ನಿರ್ಮಿತ ಶಾಹೇದ್ ಡ್ರೋನ್ ಬಳಸಿ ದಾಳಿ ನಡೆಸಿದೆ.
ಕೀವ್‌ನಲ್ಲಿ ಈ ದಾಳಿಯಿಂದಾಗಿ 11 ವರ್ಷದ ಬಾಲಕ ಸೇರಿ ಐವರು ಗಾಯಗೊಂಡಿದ್ದಾರೆ. ಸುಮಾರು 6 ಗಂಟೆ ದಾಳಿ ನಡೆಯಿತು ಎಂದು ಉಕ್ರೇನ್ ವಾಯುಪಡೆಯ ಜನರಲ್ ಮೈಕೊಲ ಒಲೆಶ್‌ಚುಕ್ ತಿಳಿಸಿದರು.
ಡ್ರೋನ್ ಉರುಳಿ ಬಿದ್ದ ಸ್ಥಳದಲ್ಲಿ ಕಟ್ಟಡಗಳಿಗೆ ಹಾನಿಯಾಗಿದ್ದು, ಬೆಂಕಿ ಹೊತ್ತಿಕೊಂಡಿರುವ ಘಟನೆಗಳು ವರದಿಯಾಗಿವೆ. ಎಂದು ಕೀವ್‌ನ ಮೇಯರ್ ವಿಟಲಿ ಲಿಟ್ಶ್‌ಕೊ ತಿಳಿಸಿದ್ದಾರೆ.