ಪ್ರತೀವರ್ಷ ನವೆಂಬರ್ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುವುದು. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಪ್ರತಿಯೊಬ್ಬರು ಮಧುಮೇಹ ನಿಯಂತ್ರಣದ ಬಗ್ಗೆ ಜಾಗ್ರತೆವಹಿಸಬೇಕಾಗಿದೆ.
ಮಧುಮೇಹ ಬಂದ ಮೇಲೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಟ್ಟರೆ ಇತರರಂತೆ ಆರೋಗ್ಯಕರ ಜೀವನ ನಡೆಸಬಹುದು. ಮಧುಮೇಹಿಗಳು ನಿಯಮಿತ ರಕ್ತಪರೀಕ್ಷೆ ಮಾಡಿಸುತ್ತಿರಬೇಕು, ಈ ರೀತಿ ರಕ್ತ ಪರೀಕ್ಷೆ ಮಾಡುವಾಗ ಸರಿಯಾದ ರಿಸಲ್ಟ್ ಬರಲು ಈ ತಪ್ಪುಗಳನ್ನು ಮಾಡದಿರಿ.
ಬೆರಳಿನ ತುದಿಯ ಮಧ್ಯದಲ್ಲಿ ಸೂಜಿ ಚುಚ್ಚಿ ರಕ್ತ ಪರೀಕ್ಷೆ ಮಾಡುವುದು
ಈ ತಪ್ಪನ್ನು ತುಂಬಾ ಜನ ಮಾಡುತ್ತಾರೆ, ಹೀಗೆ ಮಾಡುವುದರಿಂದ ತುಂಬಾನೇ ನೋವುಂಟಾಗುವುದು. ಅಲ್ಲದೆ ಇದು ತುಂಬಾ ಸೆನ್ಸಿಟಿವ್ ಜಾಗ, ಆದ್ದರಿಂದ ಭಾಗದಲ್ಲಿ ಪರೀಕ್ಷೆ ಮಾಡುವುದರಿಂದ ನೋವುಂಟಾಗುವುದು. ಅದರ ಬದಲಿಗೆ ಬೆರಳಿನ ತುದಿಯನ್ನು ಪ್ರೆಸ್ ಮಾಡಿ ತುದಿಗೆ ಚುಚ್ಚಿ ಮಧುಮೇಹ ಪರೀಕ್ಷೆ ಮಾಡಿ.
ಬೆರಳಿನ ತುದಿಯ ಮಧ್ಯದಲ್ಲಿ ಸೂಜಿ ಚುಚ್ಚಿ ರಕ್ತ ಪರೀಕ್ಷೆ ಮಾಡುವುದು ಈ ತಪ್ಪನ್ನು ತುಂಬಾ ಜನ ಮಾಡುತ್ತಾರೆ, ಹೀಗೆ ಮಾಡುವುದರಿಂದ ತುಂಬಾನೇ ನೋವುಂಟಾಗುವುದು. ಅಲ್ಲದೆ ಇದು ತುಂಬಾ ಸೆನ್ಸಿಟಿವ್ ಜಾಗ, ಆದ್ದರಿಂದ ಭಾಗದಲ್ಲಿ ಪರೀಕ್ಷೆ ಮಾಡುವುದರಿಂದ ನೋವುಂಟಾಗುವುದು. ಅದರ ಬದಲಿಗೆ ಬೆರಳಿನ ತುದಿಯನ್ನು ಪ್ರೆಸ್ ಮಾಡಿ ತುದಿಗೆ ಚುಚ್ಚಿ ಮಧುಮೇಹ ಪರೀಕ್ಷೆ ಮಾಡಿ.
ಕೈಗಳನ್ನು ತೊಳೆಯದೆ ಪರೀಕ್ಷೆ ಮಾಡುವುದು
ಶುಗರ್ ಟೆಸ್ಟ್ ಮಾಡುವಾಗ ತುಂಬಾ ಜನರು ಕೈಗಳನ್ನು ತೊಳೆಯುವುದಿಲ್ಲ, ಆದರೆ ಪರೀಕ್ಷೆಯ ರಿಸಲ್ಟ್ ಸರಿಯಾಗಿ ಬರಲು ನೀವು ಕೈಗಳನ್ನು ಸೋಪು ಹಾಕಿ ಬಿಸಿ ನೀರಿನಲ್ಲಿ ತೊಳೆದು ನಂತರ ಒರೆಸಿ, ನಂತರ ಬ್ಲೆಡ್ ಟೆಸ್ಟ್ ಮಾಡಿ.
ಎಲ್ಲಾ ಸಮಯದಲ್ಲಿ ಒಂದೇ ಬೆರಳು ಬಳಸುವುದು
ಶುಗರ್ ಬ್ಲೆಡ್ ಟೆಸ್ಟ್ ಮಾಡುವಾಗ ಒಂದೇ ಬೆರಳು ಬಳಸಬೇಡಿ. ಒಂದೇ ಬೆರಳಿಗೆ ಚುಚ್ಚುತ್ತಿದ್ದರೆ ತುಂಬಾನೇ ನೋವು ಉಂಟಾಗುವುದು, ಆದ್ದರಿಂದ ಬೇರೆ-ಬೇರೆ ಬೆರಳಿಗೆ ಚುಚ್ಚಿ ಶುಗರ್ ಟೆಸ್ಟ್ ಮಾಡಿ.
ಸ್ಟ್ರಿಪ್ ಸರಿಯಾಗಿ ಸಂಗ್ರಹಿಸಿ ಇಡದೇ ಇರುವುದು ಅವಧಿ ಮುಗಿದ ಅಥವಾ ಸರಿಯಾಗಿ ಸಂಗ್ರಹಿಸಿಡದ ಸ್ಟ್ರಿಪ್ಸ್ ಬಳಸಿದರೆ ಸರಿಯಾದ ರಿಸಲ್ಟ್ ಸಿಗುವುದಿಲ್ಲ. ಅಲ್ಲದೆ ಲ್ಯಾನ್ಸೆಂಟ್ ಕೂಡ ಅದರ ಶಾರ್ಪ್ ಕಳೆದುಕೊಳ್ಳುತ್ತದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು.
ಗ್ಲುಕೋಸ್ ಮೀಟರ್ ಬಗ್ಗೆ ಸರಿಯಾಗಿ ತಿಳಿಯದಿರುವುದು
ಗ್ಲುಕೋಸ್ ಮೀಟರ್ ಅನ್ನು ಸರಿಯಾಗಿ ಬಳಸದಿದ್ದರೆ ಸರಿಯಾದ ರಿಸಲ್ಟ್ ಸಿಗುವುದಿಲ್ಲ, ನಿಮಗೆ ಅದನ್ನು ಸರಿಯಾಗ ಬಳಸುವುದು ಹೇಗೆ ಎಂದು ಗೊತ್ತಿದ್ದರೆ ಮಾತ್ರ ಸರಿಯಾದ ಫಲಿತಾಂಶ ಸಿಗುವುದು, ಇಲ್ಲದಿದ್ದರೆ ವೈದ್ಯರ ಸಹಾಯ ಪಡೆಯಿರಿ.
ತಿಂದ ತಕ್ಷಣ ಪರೀಕ್ಷೆ ಮಾಡುವುದು ಕೆಲವರು ಊಟವಾದ ಅರ್ಧ ಗಂಟೆ ಅಥವಾ ಒಂದು ಗಂಟೆಯ ಒಳಗಾಗಿ ರಕ್ತ ಪರೀಕ್ಷೆ ಮಾಡುತ್ತಾರೆ. ಇದರಿಂದ ಸರಿಯಾದ ರಿಸಲ್ಟ್ ಸಿಗಲ್ಲ. ನೀವು ಏನಾದರೂ ಆಹಾರ ಸೇವಿಸಿದರೆ ಎರಡು ಗಂಟೆಯವರೆಗೆ ಕಾದು ನಂತರವಷ್ಟೇ ಪರೀಕ್ಷೆ ಮಾಡಿಸಿ.
ಯಾವುದೆಲ್ಲಾ ಸಮಯದಲ್ಲಿ ಬ್ಲಡ್ ಟೆಸ್ಟ್ ಮಾಡುವುದು
ಆ ರೀತಿ ಬ್ಲಡ್ ಟೆಸ್ಟ್ ಮಾಡಬೇಡಿ. ಒಂದೋ ಬೆಳಗ್ಗೆ ಅಥವಾ ರಾತ್ರಿ ಮಲಗುವ ಮುನ್ನ ಬ್ಲಡ್ ಟೆಸ್ಟ್ ಮಾಡಿದರೆ ಮಾತ್ರ ರಕ್ತದಲ್ಲಿ ಸಕ್ಕರೆಯಂಶ ಎಷ್ಟಿದೆಯೆಂಬುವುದು ನಿಖರವಾಗಿ ತಿಳಿಯಲು ಸಾಧ್ಯ.