ಪ್ಯಾರಿಸ್: ಕಳೆದ ವರ್ಷ ಕತಾರ್‌ನಲ್ಲಿ ನಡೆದ ಫಿಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸುವ ಮೂಲಕ ವೃತ್ತಿಜೀವನದ ಮಹತ್ವಾಕಾಂಕ್ಷೆಯನ್ನು ಪೂರೈಸಿಕೊಂಡಿದ್ದ ಲಿಯೋನೆಲ್ ಮೆಸ್ಸಿ ಸೋಮವಾರ ದಾಖಲೆಯ ಎಂಟನೇ ಬಾರಿಗೆ ಬ್ಯಾಲನ್ ಡಿಓರ್ (ಚಿನ್ನದ ಚೆಂಡು) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
್ರಾ ನ್ಸ್‌ನ ಕೈಲಿಯಾನ್ ಎಂಬಪೆ, ಮ್ಯಾಂಚೆಸ್ಟರ್ ಸಿಟಿ ಕ್ಲಬ್‌ನ ಎರ್ಲಿಂಗ್ ಹಾಲೆಂಡ್ ಅವರನ್ನು ಹಿಂದಿಕ್ಕಿ ಮೆಸ್ಸಿ ಪ್ರಶಸ್ತಿ ಒಲಿಸಿಕೊಂಡರು. 'ಇಂದು ನಾನು ನನ್ನನ್ನು ಆನಂದಿಸುತ್ತಿದ್ದೇನೆ. ಇದು ನನ್ನನ್ನು ಎಂದಿಗೂ ಬಿಟ್ಟು ಹೋಗದ ಸಂತೋಷವಾಗಿದೆ ಮತ್ತು ಮುಂಬರುವ ಹಲವು ವರ್ಷಗಳವರೆಗೆ ಇದನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ' ಎಂದ ಮೆಸ್ಸಿ, ಗೆಲುವನ್ನು ಸಾಧ್ಯವಾಗಿಸಿದ ಅರ್ಜೆಂಟೀನಾ ಕೋಚ್, ತಂಡದ ಸಹ ಆಟಗಾರರಿಗೆ ಧನ್ಯವಾದ ತಿಳಿಸಿದರು. ಮಹಿಳೆಯರ ವಿಭಾಗದಲ್ಲಿ ಸ್ಪೇನ್‌ನ ಐತಾನಾ ಬೋನ್ಮಾತಿಗೆ ಪ್ರಶಸ್ತಿ ಒಲಿದಿದೆ. ಇದಕ್ಕೂ ಮುನ್ನ ಲಿಯೋನೆಲ್ ಮೆಸ್ಸಿ 2009, 2010,2011, 2012, 2015, 2019 ಹಾಗೂ 2021ರಲ್ಲಿ ಬ್ಯಾಲನ್ ಡಿಓರ್ ಪ್ರಶಸ್ತಿ ಜಯಿಸಿದ್ದರು. ಕ್ರಿಶ್ಚಿಯಾನೊ ರೊನಾಲ್ಡೊ ಐದು ಬಾರಿ ಈ ಪ್ರಶಸ್ತಿ ಜಯಿಸಿದ್ದಾರೆ.