HEALTH TIPS

9 ನಾಗರಿಕರ ಕೊಲೆಗೈದ ಶಂಕೆ: ಇಬ್ಬರು ಯೋಧರನ್ನು ವಶಕ್ಕೆ ಪಡೆದ ರಷ್ಯಾ

              ಮಾಸ್ಕೊ: ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಮಂದಿಯನ್ನು ಕೊಲೆ ಮಾಡಿದ ಶಂಕೆ ಮೇರೆಗೆ ಇಬ್ಬರು ಸೈನಿಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ರಷ್ಯಾ ನಿಯಂತ್ರಿತ ಈಶಾನ್ಯ ಉಕ್ರೇನ್‌ನ ಭಾಗದ ತನಿಖಾಧಿಕಾರಿಗಳು ತಿಳಿಸಿದ್ದಾರೆ.

                ಆ ಕುಟುಂಬದೊಂದಿಗೆ ವೈಯಕ್ತಿಕ ದ್ವೇಷದಿಂದಾಗಿ ಈ ಯೋಧರು ಕೃತ್ಯ ಎಸಗಿರಬಹುದು ಎಂದು ತನಿಖಾಧಿಕಾರಿಗಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

              ಡೊನೆಟ್‌ಸ್ಕ್ ಮತ್ತು ಮೆಲಿಟೊಪೊಲ್ ಮಧ್ಯದಲ್ಲಿರುವ ಕೈಗಾರಿಕಾ ಪಟ್ಟಣ ವೊಲ್ನೊವಾಖಾದಲ್ಲಿ ಈ ಘಟನೆ ನಡೆದಿದೆ. ಕುಟುಂಬ ಸದಸ್ಯರನ್ನು ಕೊಲ್ಲಲು ದುಷ್ಕರ್ಮಿಗಳು ಮೆಷಿನ್ ಗನ್ ಬಳಕೆ ಮಾಡಿದ್ದಾರೆ ಎಂದು ರಷ್ಯಾದ ಮಾಧ್ಯಮ ವರದಿ ಮಾಡಿದೆ.

                  ಈ ಅಪರಾಧ ಕೃತ್ಯದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಉಕ್ರೇನ್ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries