HEALTH TIPS

ಬಿಹಾರದಲ್ಲಿ ಶೇ 95 ಜನರು ಸ್ವಂತ ವಾಹನ ಹೊಂದಿಲ್ಲ: ಜಾತಿ ಸಮೀಕ್ಷೆ ವರದಿ

               ಟ್ನಾ: ಬಿಹಾರದಲ್ಲಿ ಶೇಕಡ 95.49 ರಷ್ಟು ಜನರು ಸ್ವಂತ ವಾಹನವನ್ನು ಹೊಂದಿಲ್ಲ. ಕೇವಲ 3.8 ಪ್ರತಿಶತದಷ್ಟು ಜನರು ದ್ವಿಚಕ್ರ ವಾಹನ ಹೊಂದಿದ್ದಾರೆ ಮತ್ತು 0.11 ಪ್ರತಿಶತದಷ್ಟು ಜನರು ಕಾರುಗಳನ್ನು ಹೊಂದಿದ್ದಾರೆ ಎಂದು ಜಾತಿ ಸಮೀಕ್ಷೆ ವರದಿ ತಿಳಿಸಿದೆ.

            ಬಿಹಾರದಿಂದ ವಲಸೆಯ ಬಗ್ಗೆಯೂ ವರದಿಯಲ್ಲಿ ಬೆಳಕು ಚೆಲ್ಲಿದ್ದು, 45.78 ಲಕ್ಷ ಜನರು ಇತರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದರೆ, 2.17 ಲಕ್ಷ ಜನರು ವಿದೇಶದಲ್ಲಿದ್ದಾರೆ ಎಂದು ಹೇಳಿದೆ.

13.07 ಕೋಟಿ ಜನರ ಪೈಕಿ 12.48 ಕೋಟಿ ಜನರು ಯಾವುದೇ ವಾಹನ ಹೊಂದಿಲ್ಲ ಎಂದು ಮಂಗಳವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲಾದ ವರದಿಯಲ್ಲಿ ತಿಳಿಸಲಾಗಿದೆ.

                   ಕೇವಲ 49.68 ಲಕ್ಷ ಜನರು ಅಥವಾ ಜನಸಂಖ್ಯೆಯ ಸುಮಾರು 3.8 ಪ್ರತಿಶತದಷ್ಟು ಜನರು ದ್ವಿಚಕ್ರ ವಾಹನ ಹೊಂದಿದ್ದರೆ, ಕೇವಲ 5.72 ಲಕ್ಷ ಜನರು ಅಥವಾ 0.11 ಪ್ರತಿಶತದಷ್ಟು ಜನರು ನಾಲ್ಕು ಚಕ್ರದ ವಾಹನ ಹೊಂದಿದ್ದಾರೆ. ಕೇವಲ 1.67 ಲಕ್ಷ ಜನರು ಅಥವಾ ಶೇಕಡ 0.13 ರಷ್ಟು ಜನರು ಮಾತ್ರ ಟ್ರ್ಯಾಕ್ಟರ್‌ ಹೊಂದಿದ್ದಾರೆ ಎಂದು ವರದಿ ಹೇಳಿದೆ.

               ಸಾಮಾನ್ಯ ವರ್ಗಕ್ಕೆ ಸೇರಿದ 2.01 ಕೋಟಿ ಜನರಲ್ಲಿ ಒಟ್ಟು 11.99 ಲಕ್ಷ ಜನರು ಮಾತ್ರ ದ್ವಿಚಕ್ರ ವಾಹನಗಳನ್ನು ಹೊಂದಿದ್ದಾರೆ.

                ವಿದೇಶಕ್ಕೆ ತೆರಳಿರುವ 2.17 ಲಕ್ಷ ಜನರ ಪೈಕಿ 23,738 ಮಂದಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇತರ ದೇಶಗಳಲ್ಲಿ ಕೆಲಸ ಮಾಡುವವರಲ್ಲಿ 76,326 ಜನರು ಸಾಮಾನ್ಯ ವರ್ಗಕ್ಕೆ ಸೇರಿದವರು.

                  ಬಿಹಾರದ 45,78,669 ಜನರು ಅಥವಾ ಜನಸಂಖ್ಯೆಯ 3.5 ಪ್ರತಿಶತದಷ್ಟು ಜನರು ಇತರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

                   215 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಆರ್ಥಿಕ ಸ್ಥಿತಿಯ ವರದಿಯನ್ನು ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries