ಲಂಡನ್: ಭಯಾನಕ ರೋಬೋಟ್ ಮರವನ್ನು ಸರಸರನೆ ಕ್ಷಣಾರ್ಧದಲ್ಲಿ ಹತ್ತಬಲ್ಲದು, ಮನುಷ್ಯರು ಮಾಡುವ ಕೆಲಸಗಳನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ನಿಮಿಷಗಳಲ್ಲಿ ಮಾಡುತ್ತದೆ, ಮಾನವ ಸಂಪನ್ಮೂಲದ ಜಾಗದಲ್ಲಿ ಎಐ ತಂತ್ರಜ್ಞಾನ ತನ್ನ ಚಳಕ ತೋರಿಸುತ್ತದೆ,,,ಎಲ್ಲವೂ ಸರಿ, ಕೇಳಲು ಹಿತ.ಆದರೆ...
ಮಾನವ ಜನಾಂಗಕ್ಕೆ ಕೆಲಸ ಕಡಿಮೆಯಾಗುವ ಪರಿಸ್ಥಿತಿ ಅಂದರೆ ಜನರಿಗೆ ಕೆಲಸದ ಅವಕಾಶಗಳು ಕ್ಷೀಣಿಸುವ ಸ್ಥಿತಿ ಹೆಚ್ಚು ದೂರದಲ್ಲಿಲ್ಲ ಎನ್ನುತ್ತಾರೆ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೊನ್ ಮಸ್ಕ್. ಅವರು ಇದನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ವಿವರಿಸಿದ್ದಾರೆ.
ಕೆಲಸಕ್ಕೆ ಮನುಷ್ಯರು ಬೇಕಾಗಿಲ್ಲ ಎಐ ಮಾಡುತ್ತದೆ, ಹೀಗಾಗಿ ಎಐ ಇತಿಹಾಸದಲ್ಲಿಯೇ ಅತ್ಯಂತ ವಿಚ್ಛಿದ್ರಕಾರಕ ಶಕ್ತಿ ಎಂದು ಎಲೊನ್ ಮಸ್ಕ್ ರಿಷಿ ಸುನಕ್ ಅವರ ಜೊತೆ ನಡೆಸಿದ ಸಂವಾದ ವೇಳೆ ಬಣ್ಣಿಸಿದ್ದಾರೆ. ಅತ್ಯಂತ ಬುದ್ಧಿವಂತ ಮನುಷ್ಯನಿಗಿಂತ ಎಐ ಹೆಚ್ಚು ಬುದ್ಧಿವಂತ ಎನ್ನುತ್ತಾರೆ ಮಸ್ಕ್.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಒಳ್ಳೆದು ಇದೆ, ಕೆಟ್ಟದೂ ಇದೆ. ಭವಿಷ್ಯದಲ್ಲಿ ನಮ್ಮ ಮುಂದಿರುವ ಸವಾಲು ಎಂದರೆ ಜೀವನದಲ್ಲಿ ಅರ್ಥ ಕಂಡುಕೊಳ್ಳುವುದು ಹೇಗೆ ಎಂಬುದು. ಇಲ್ಲಿ ಮಾನವರೂಪದ ರೋಬೋಟ್ ಗಳಿಂದ ಸುರಕ್ಷತೆ ಭಾವ ಕಾಡುತ್ತದೆ. ಕಾರೊಂದು ಮನುಷ್ಯನನ್ನು ಈಗ ಕಟ್ಟಡದ ಮೇಲೆಯವರೆಗೆ ಅಥವಾ ಮರದ ಮೇಲೆಯವರೆಗೆ ಬೆನ್ನಟ್ಟಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ನೆರೆದಿದ್ದ ಸಭಿಕರನ್ನುದ್ದೇಶಿಸಿ ಮಸ್ಕ್ ಹೇಳಿದರು.
ಅದಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ನೀವು ಇದನ್ನು ಮಾರಾಟ ಮಾಡುವುದಿಲ್ಲವಲ್ಲ ಎಂದು ಕೇಳಿದರು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಶೃಂಗಸಭೆಯಲ್ಲಿ ವಿಶ್ವದ 100ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದ ಕೇಂದ್ರ ಲಂಡನ್ ನ ಲ್ಯಾಂಕಸ್ಟರ್ ಹೌಸ್ ನಲ್ಲಿ ಕಾರ್ಯಕ್ರಮದಲ್ಲಿ ಈ ಸಂವಾದ ನಡೆಯಿತು.
ಎಐಯಿಂದ ಉದ್ಯೋಗಕ್ಕೆ ಕುತ್ತುಂಟಾಗುವ ಸಾಧ್ಯತೆಯಿರುವುದರಿಂದ ಭಾರತ ಅಮೆರಿಕ, ಇಂಗ್ಲೆಂಡ್, ಐರೋಪ್ಯ ಒಕ್ಕೂಟ ಸೇರಿದಂತೆ ಇತರ 27 ದೇಶಗಳೊಂದಿಗೆ ಬ್ರಿಟನ್ ಪ್ರಧಾನ ಮಂತ್ರಿಗಳು ಆಯೋಜಿಸಿದ್ದ ಮೊಟ್ಟಮೊದಲ 'AI ಸುರಕ್ಷತಾ ಶೃಂಗಸಭೆ'ಯಲ್ಲಿ AI ಗೆ ಸಂಬಂಧಿಸಿದ ಅಪಾಯಗಳ ಮೌಲ್ಯಮಾಪನದ ಮೇಲೆ ಗಮನ ಹರಿಸುವ ಕುರಿತು ಕೆಲಸ ಮಾಡುವ ಪ್ರತಿಜ್ಞೆಗೆ ಸಹಿ ಹಾಕಿದರು.