ನವದೆಹಲಿ : ಮತದಾರರ ಪಟ್ಟಿಯಲ್ಲಿ ಪುನರಾವರ್ತನೆಯಾಗಿರುವ ಹೆಸರುಗಳನ್ನು ಕೈಬಿಡಲು ಕೋರಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಈ ಅರ್ಜಿಯ ಪ್ರತಿಯನ್ನು ಚುನಾವಣಾ ಆಯೋಗದ (ಇಸಿಐ) ವಕೀಲರಿಗೂ ನೀಡುವಂತೆ ಅರ್ಜಿದಾರ 'ಸಂವಿಧಾನ ಬಚಾವೋ ಟ್ರಸ್ಟ್'ಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ.
'ಈ ವಿಷಯದಲ್ಲಿ ನ್ಯಾಯಾಲಯವು ಮುಂದಿನ ಹೆಜ್ಜೆ ಇಡಲು ನಿರ್ಧರಿಸುವ ಮೊದಲು, ಅರ್ಜಿಯ ಪ್ರತಿಯನ್ನು ಭಾರತೀಯ ಚುನಾವಣಾ ಆಯೋಗದ ವಕೀಲ ಅಮಿತ್ ಶರ್ಮಾ ಅವರಿಗೆ ಸಲ್ಲಿಸಲು ಅರ್ಜಿದಾರರಿಗೆ ನಿರ್ದೇಶನ ನೀಡುವುದು ಸೂಕ್ತ' ಎಂದು ಪೀಠವು ನ.10ರಂದು ಹೊರಡಿಸಿದ ಆದೇಶದಲ್ಲಿ ಹೇಳಿದೆ.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ, ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿಯವರ ಹೇಳಿಕೆ ಉಲ್ಲೇಖಿಸಿ, ಮತದಾರರ ಪಟ್ಟಿಯಲ್ಲಿರುವ ಪುನರಾವರ್ತೆಯಾದ ಹೆಸರುಗಳ ಪರಿಶೀಲನೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬುದನ್ನು ಪೀಠದ ಗಮನಕ್ಕೆ ತಂದರು.
'ಮತದಾರರ ಪಟ್ಟಿಯಲ್ಲಿ ಪುನರಾವರ್ತಿತ ಹೆಸರುಗಳ ನಮೂದು ಸಮಸ್ಯೆ ನಿವಾರಿಸಲು ಯಾವುದೇ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಿಲ್ಲ. ಈ ವರ್ಷದ ಜುಲೈ ಮತ್ತು ಆಗಸ್ಟ್ ನಡುವೆ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಈ ಸಮಸ್ಯೆ ನಿವಾರಣೆಯಾಗಬೇಕಿತ್ತು. ಆದರೆ, ಈ ಕೆಲಸ ಆಗಿಲ್ಲ' ಎಂದು ಅರ್ಜಿದಾರರ ವಕೀಲರು, ವಿಚಾರಣೆಯ ಸಂದರ್ಭ ಒತ್ತಿ ಹೇಳಿದರು.
ಆಗ ಪೀಠವು, ಚುನಾವಣಾ ಆಯೋಗದ ಮೊರೆ ಹೋಗುವಂತೆ ವಕೀಲರಿಗೆ ಸೂಚಿಸಿತು. ಆದರೆ, ಅರ್ಜಿದಾರರ ವಕೀಲರು, ಇಸಿಐ ಮುಂದೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೀಠದ ಗಮನಕ್ಕೆ ತಂದರು.
ಪೀಠವು ಮುಂದಿನ ವಿಚಾರಣೆಯನ್ನು ಇದೇ ತಿಂಗಳ 28ಕ್ಕೆ ನಿಗದಿಪಡಿಸಿದೆ.