ಮುಳ್ಳೇರಿಯ: ಮುಳ್ಳೇರಿಯ ಸನಿಹದ ದೇಲಂಪಾಡಿ ಶ್ರೀ ಧರ್ಮಶಾಸ್ತಾ ಭಜನಾಮಂದಿರದಲ್ಲಿ ಶ್ರೀ ಅಯ್ಯಪ್ಪನ್ ಪಾಟ್, ಪೊಲಿಪ್ಪಾಟ್‍ನೊಂದಿಗೆ ನಾಲ್ಕು ದಿವಸಗಳ ಕಾಲ ನಡೆದ ಶ್ರೀ ಅಯ್ಯಪ್ಪನ್ ದೀಪೋತ್ಸವ ಸೋಮವಾರ ಸಂಪನ್ನಗೊಂಡಿತು.
ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ, ನೃತ್ಯ ವೈಭವ, ಹನುಮಗಿರಿ ಮೇಳದವರಿಂದ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಶಿಷ್ಯವೃಂದದಿಂದ ನೃತ್ಯವೈವಿಧ್ಯ ನಡೆಯಿತು. ಚೆಂಡೆ ಮೇಳ, ಧಾರ್ಮಿಕ ಸಭೆ, ಶ್ರೀ ಅಯ್ಯಪ್ಪ ಪೂಜೆ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಅಮೃತ್ ಅಡಿಗ ಪಾಣಾಜೆ, ಭರತ್ ಶೆಟ್ಟಿ ಸಿದ್ಧಕಟ್ಟೆ ಅವರಿಂದ ಪಂಚಸ್ವರ ಮಾಧುರ್ಯ ಯಕ್ಷ-ಗಾನ-ವೈಭವ, ಪಾಲೆಕೊಂಬು ಮೆರವಣಿಗೆ, ಮಂಗಳಾರತಿ, ಶ್ರೀ ಅಯ್ಯಪ್ಪ ಪೂಜೆ ನಡೆಯಿತು.