HEALTH TIPS

ಕ್ಯಾಬೇಜ್‌ ತಿಂದರೆ ಮೂರ್ಛೆ ರೋಗ ಬರುವುದೇ? ಕ್ಯಾಬೇಜ್‌ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ

 ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಬೇಜ್ ತಿಂದರೆ ಮೂರ್ಛೆ ರೋಗ ಬರುತ್ತದೆ ಎಂಬ ಸುದ್ದಿ ಹರಿದಾಡುವುದನ್ನು ನಿಮ್ಮಲ್ಲಿ ಕೆಲವರು ಗಮನಿಸಿರಬಹುದು. ಕ್ಯಾಬೇಜ್‌ನಲ್ಲಿರುವ ಹುಳು ಮೆದುಳಿಗೆ ಹಾನಿ ಮಾಡುವುದು, ಇದರಿಂದ ಅಪಸ್ಮಾರದಂಥ ರೋಗ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಕುರಿತು ಬನಾರಸ್ ಹಿಂದೂ ಯೂನಿವರ್ಸಿಟಿಯ ನ್ಯೂರೋಲಾಜಿ ವಿಭಾಗದ ಪ್ರೊಫೆಸರ್ ಡಾ. ವಿಜಯಂತ ಮಿಶ್ರಾ ಈ ಸುದ್ದಿಯ ಹಿಂದಿನ ಸತ್ಯಾಸತ್ಯೆಯ ಬಗ್ಗೆ ಈ ರೀತಿ ಹೇಳಿದ್ದಾರೆ.

ಕ್ಯಾಬೇಜ್‌ ತಿಂದರೆ ಮೆದುಳಿಗೆ ಹಾನಿಯುಂಟಾಗುವುದೇ?
ಡಾ. ಮಿಶ್ರಾ ಒಂದು ವೀಡಿಯೋವನ್ನು ಶೇರ್ ಮಾಡಿ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಕ್ಯಾಬೇಜ್ ಎಲೆಗಳಲ್ಲಿ proboscis ಎಂಬ ಕೀಟಗಳು ಎಲೆಗಳಲ್ಲಿ ಮೊಟ್ಟೆ ಹಾಕುತ್ತದೆ, ಕ್ಯಾಬೇಜ್ ಎಂದಾಗ ಆ ಮೊಟ್ಟೆ ನಮ್ಮ ದೇಹವನ್ನು ಸೇರಿದಾಗ ಹುಳುಗಳಾಗಿ ನಮ್ಮ ದೇಹದ ಯಾವುದೇ ಭಾಗವನ್ನು ತಲುಪಬಹುದು, ಇದು ಮೆದುಳಿಗೆ ತಲುಪಿದರೆ ಮೂರ್ಛೆ ರೋಗ ಉಂಟಾಗಬಹುದು.

ಕ್ಯಾಬೇಜ್‌ಗೆ ಆ ಹುಳುಗಳು ಹೇಗೆ ಬರುತ್ತದೆ? ಕ್ಯಾಬೇಜ್‌ಗೆ ಆ ಹುಳುಗಳು ಚಿಟ್ಟೆಯ ಮುಖಾಂತರ ಬರುತ್ತದೆ, ಕೀಟಗಳು ಎಲೆಯಲ್ಲಿ ಮೊಟ್ಟೆಗಳನ್ನು ಇಡುತ್ತವೆ, ಇದೆಲ್ಲಾದರೂ ಹೊಟ್ಟೆ ಸೇರಿದರೆ ಹೊಟ್ಟೆಯಲ್ಲಿ ಹುಳುಗಳಾಗಿ ಮೆದುಳಿಗೆ ಹಾನಿಯುಂಟು ಮಾಡುವುದು. ಅಲ್ಲದೆ ವೇಸ್ಟ್ ನೀರನ್ನು ಕ್ಯಾಬೇಜ್‌ ಬೆಳೆಯಲು ಬಳಸುತ್ತಾರೆ ಇದರಿಂದ ಕೂಡ . Pieris rapae, cabbage looper ಎಂಬ ಹುಳುಗಳು ಕ್ಯಾಬೇಜ್ ಎಲೆಗಳಲ್ಲಿರುವ ಸಾಧ್ಯತೆ ಇದೆ.

ಬೇಯಿಸಿದಾಗ ಈ ಹುಳುಗಳು ಸಾಯುತ್ತವೆಯೇ?
ಕ್ಯಾಬೇಜ್ ಪಲ್ಯ ಅಥವಾ ಸಾರು ಮಾಡಿದರೆ ಹುಳುಗಳು ಸಾಯುತ್ತವೆಯೇ? ಎಂದರೆ ಇಲ್ಲ ಅಂತಾರೆ ಡಾ. ಮಿಶ್ರಾ. ಆದ್ದರಿಂದ ಕ್ಯಾಬೇಜ್‌ನಲ್ಲಿರುವ ಈ ಹುಳು ತುಂಬಾನೇ ಅಪಾಯಕಾರಿ ಎಂದು ಹೇಳಲಾಗುವುದು.

ಹಾಗಾದರೆ ಕ್ಯಾಬೇಜ್‌ ಬಳಸುವಾಗ ಹೇಗೆ ಬಳಸಿದರೆ ಸುರಕ್ಷಿತ'
ಹಸಿ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ಕ್ಯಾಬೇಜ್‌ ಎಲೆಗಳನ್ನು ಹಾಕಿ ಅರ್ಧ ಗಂಟೆ ಬಿಡಿ, ನಂತರ ತೊಳೆದು ಬಳಸುವುದರಿಂದ ಈ ರೀತಿಯ ಹುಳಗಳು ಅಥವಾ ಹುಳಗಳ ಮೊಟ್ಟೆಗಳು ದೇಹದೊಳಗೆ ಸೇರುವುದನ್ನು ತಡೆಗಟ್ಟಬಹುದು. ಆದ್ದರಿಂದ ನೀವು ಕ್ಯಾಬೇಜ್ ಬಳಸುವಾಗ ಈ ವಿಧಾನವನ್ನು ತಪ್ಪದೆ ಬಳಸಿ.

ಹಸಿ ಕ್ಯಾಬೇಜ್ ಸುರಕ್ಷಿತವೇ?
ನೀವು ಹಸಿ ಕ್ಯಾಬೇಜ್‌ ಹೊರಗಡೆ ತಿನ್ನಬೇಡಿ, ಕೆಲ ಹೋಟೆಲ್‌ನಲ್ಲಿ ಕೊಡುತ್ತಾರೆ, ಸೇವಿಸಬೇಡಿ, ಮನೆಯಲ್ಲಿ ಉಪ್ಪು ನೀರಿನಲ್ಲಿ ಹಾಕಿಟ್ಟು ಚೆನ್ನಾಗಿ ತೊಳೆದ ಬಳಿಕವಷ್ಟೇ ಸೇವಿಸಿ.

ಪ್ರತಿಯೊಂದು ತರಕಾರಿಯನ್ನು ಉಪ್ಪು ನೀರಿನಲ್ಲಿ ತೊಳೆಯಿರಿ
ಬರೀ ಕ್ಯಾಬೇಜ್‌ ಮಾತ್ರವಲ್ಲ, ಪ್ರತಿಯೊಂದು ತರಕಾರಿಗಳನ್ನು ಸ್ವಲ್ಪ ಬಿಸಿ ನೀರಿಗೆ ಉಪ್ಪು ಹಾಕಿಟ್ಟು ಅದರಲ್ಲಿ ಹಾಕಿ ತೊಳೆದು ಬಳಸಿ. ಹೂ ಕೋಸು, ಬ್ರೊಕೋಲಿ ಈ ಬಗೆಯ ತರಕಾರಿಗಳನ್ನು ಬಳಸುವಾಗ ಎಚ್ಚರವಹಿಸಿ.

ಕ್ಯಾಬೇಜ್‌ನಲ್ಲಿರುವ ಆರೋಗ್ಯಕರ ಗುಣಗಳು 

ಕ್ಯಾಬೇಜ್‌ನಲ್ಲಿರುವ ಆರೋಗ್ಯಕರ ಗುಣಗಳು ಕ್ಯಾಲೋರಿ 22 ಪ್ರೊಟೀನ್‌ 1 ಗ್ರಾಂ ನಾರಿನಂಶ 2 ಗ್ರಾಂ ವಿಟಮಿನ್ ಕೆ ವಿಟಮಿನ್ ಸಿ ಫೋಲೆಟ್‌ ಮ್ಯಾಂಗನೀಸ್‌ ವಿಟಮಿನ್‌ ಬಿ6 ಕ್ಯಾಲ್ಸಿಯಂ ಪೊಟಾಷ್ಯಿಯಂ ಮೆಗ್ನಿಷ್ಯಿಯಂ 2. ಉರಿಯೂತ ಕಡಿಮೆ ಮಾಡುತ್ತದೆ: ಸಂಧಿವಾತ, ಹೃದಯ ಸಂಬಂಧಿ ಸಮಸ್ಯೆ ಇರುವವರೆಗೆ ಉರಿಯೂತದ ಸಮಸ್ಯೆ, ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಈ ಬಗೆಯ ಸಮಸ್ಯೆ ಉಂಟಾಗುವುದು. ಕ್ಯಾಬೇಜ್ ಉರಿಯೂತದ ಸಮಸ್ಯೆ ಕಡಿಮೆ ಮಾಡಲು ಸಹಕಾರಿಯಾಗಿದೆ. 3. ವಿಟಮಿನ್‌ ಸಿ ಇದೆ: ವಿಟಮಿನ್‌ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಅಲ್ಲದೆ ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕುವಲ್ಲಿ ಕೂಡ ಸಹಕಾರಿ. ಇದು ಶ್ವಾಸ ಕೋಶಧ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ. 4. ಇದು ಜೀರ್ಣಕ್ರಿಯೆಗೆ ಒಳ್ಳೆಯದು: ಕ್ಯಾಬೇಜ್‌ನಲ್ಲಿ ನಾರಿನಂಶ ತುಂಬಾ ಚೆನ್ನಾಗಿರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಕ್ಯಾಬೇಜ್ ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ. 5. ರಕ್ತದೊತ್ತಡ ಕಡಿಮೆ ಮಾಡುತ್ತದೆ: ಕ್ಯಾಬೇಜ್ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. 6. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ: ಕ್ಯಾಬೇಜ್‌ ತಿನ್ನುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಕಾರಿ. 7. ಕ್ಯಾಬೇಜ್‌ನಲ್ಲಿ ವಿಟಮಿನ್‌ ಕೆ ಇದೆ: ಕ್ಯಾಬೇಜ್‌ನಲ್ಲಿ ಅತ್ಯಧಿಕ ವಿಟಮಿನ್ ಕೆ ಇದೆ 8. ಜೀರ್ಣಕ್ರಿಯೆಗೆ ಒಳ್ಳೆಯದು. ಈ ಕ್ಯಾಬೇಜ್‌ ಬಗ್ಗೆ ಹರಿದಾಡುತ್ತಿರುವ ವೀಡಿಯೋ ನೋಡಿ ಭಯ ಪಡಬೇಡಿ.. ಕ್ಯಾಬೇಜ್‌ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ತಿನ್ನುವಾಗ ಜಾಗ್ರತೆವಹಿಸಿ ಅಷ್ಟೇ...




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries