ಕಾಸರಗೋಡು: ಹೊಸದುರ್ಗ ಉಪಜಿಲ್ಲಾ ಶಾಲಾ ಕ್ರೀಡಾಕೂಟದ ಖೋ ಖೋ ಚಾಂಪಿಯನ್ ಶಿಪ್ ನಲ್ಲಿ ಬಾನಂ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಜೂನಿಯರ್ ಬಾಲಕಿಯರು ಮತ್ತು ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಈ ಗೆಲುವು ಸಾಧಿಸಿದ್ದಾರೆ. ಜೂನಿಯರ್ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಶಾಲೆ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಕಾಞಂಗಾಡ್ ಲಿಟ್ಲ್ ಫ್ಲವರ್ ಗಲ್ರ್ಸ್ ಹೈಸ್ಕೂಲ್ ಹಾಗೂ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಜಿವಿಎಚ್ ಎಸ್‍ಎಸ್ ಮಡಿಕೈ ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಜೂನಿಯರ್ ಬಾಲಕರ ವಿಭಾಗದ ಫೈನಲ್‍ನಲ್ಲಿ ಮಡಿಕೈ ಜಿವಿಎಚ್‍ಎಸ್‍ಎಸ್ ವಿದ್ಯಾರ್ಥಿಗಳನ್ನು ಪರಭವಗೊಳಿಸಿ ಪ್ರಶಸ್ತಿ ಪಡೆದುಕೊಂಡಿದೆ.