ಟೆಲ್ ಅವೀವ್: ಗಾಜಾ ಪಟ್ಟಿ ಸಂಘರ್ಷದಲ್ಲಿ ಸಾವನ್ನಪ್ಪಿರುವ 17 ಇಸ್ರೇಲಿ ಯೋಧರ ಪೈಕಿ ಭಾರತ ಮೂಲದ ಯೋಧರೊಬ್ಬರಿದ್ದಾರೆ ಎಂದು ದಕ್ಷಿಣ ಇಸ್ರೇಲ್ ನ ಮೇಯರ್ ಖಚಿತಪಡಿಸಿದ್ದಾರೆ.
ಮೇಯರ್ ಬೆನ್ನಿ ಬಿಟ್ಟನ್ ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಭಾರತ ಮೂಲದ ಇಸ್ರೇಲಿ ಯೋಧ ಸಿಬ್ಬಂದಿ-ಸಾರ್ಜೆಂಟ್ ಹಾಲೆಲ್ ಸೊಲೊಮನ್ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯಿಂದ 1400 ಕ್ಕೂ ಹೆಚ್ಚು ಇಸ್ರೇಲಿ ಜನರನ್ನು ಕೊಂದ ನಂತರ ಮತ್ತು 200 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ತೆಗೆದುಕೊಂಡ ನಂತರ ಗಾಜಾ ಪಟ್ಟಿಯಲ್ಲಿ 11,000 ಕ್ಕೂ ಹೆಚ್ಚು ಗುರಿಗಳನ್ನು ಹೊಡೆದುರುಳಿಸಿದ್ದೇವೆ ಎಂದು ಇಸ್ರೇಲಿ ಸೇನೆ ಹೇಳಿದೆ.