HEALTH TIPS

ಭಾರತ -ಕೆನಡಾ ವಿವಾದ| ರಾಜತಾಂತ್ರಿಕ ಚರ್ಚೆಗೆ ಮಾರ್ಗಗಳಿವೆ: ಜೈಶಂಕರ್

           ವದೆಹಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಲು ರಾಜತಾಂತ್ರಿಕ ಹಂತದಲ್ಲಿ ಚರ್ಚೆಗೆ ಅವಕಾಶಗಳಿವೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಪ್ರತಿಪಾದಿಸಿದ್ದಾರೆ.

            'ಉಭಯ ದೇಶಗಳು ಸಂಪರ್ಕದಲ್ಲಿದ್ದು, ವಿವಾದ ಬಗೆಹರಿಸಿಕೊಳ್ಳಲು ಮಾರ್ಗೋಪಾಯಗಳನ್ನು ಗುರುತಿಸುವ ವಿಶ್ವಾಸವಿದೆ' ಎಂದರು.

ಅದೇ ಸಂದರ್ಭದಲ್ಲಿ 'ದೇಶದ ಸಾರ್ವಭೌಮತೆ ಮತ್ತು ಸೂಕ್ಷ್ಮತೆ' ಏಕಮುಖವಾಗಿರಬಾರದು' ಎಂದೂ ಜೈಶಂಕರ್ ಪ್ರತಿಪಾದಿಸಿದರು.

               'ನನ್ನ ಪ್ರಕಾರ, ರಾಜತಾಂತ್ರಿಕ ಹಂತದ ಚರ್ಚೆಗೆ ಅವಕಾಶಗಳಿವೆ. ಕೆನಡಾದ ವಿದೇಶಾಂಗ ಸಚಿವರು ಇದೇ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿಸಿದ್ದು, ನಾವು ಸಂಪರ್ಕದಲ್ಲಿದ್ದೇವೆ' ಎಂದು ಹೇಳಿದರು.

             'ಆದರೆ, ದೇಶದ ಸಾರ್ವಭೌಮತೆ ಮತ್ತು ಸೂಕ್ಷ್ಮತೆ ಎಂಬುದು ಏಕಮುಖವಾಗಿರಬಾರದು. ಅವರಿಗೆ ತಮ್ಮದೇ ಆದ ಆತಂಕಗಳು ಇರಬಹುದು. ಯಾವುದೇ ರಾಷ್ಟ್ರದ ಶಾಸನಬದ್ಧ ಕಾಳಜಿ ಕುರಿತು ಮಾತನಾಡುವುದಾಗಿ ನಾನು ಎಂದಿಗೂ ಹೇಳಿಲ್ಲ' ಎಂದರು.

              'ಸಿಖ್ ಪ್ರತ್ಯೇಕವಾದಿ ನಾಯಕ ಹರ್‌ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಹಿಂದೆ ಭಾರತೀಯ ಏಜೆಂಟರ ಕೈವಾಡವಿದೆ' ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಆರೋಪಿಸಿದ್ದು, ತದನಂತರ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಾಂಧವ್ಯವು ಹದಗೆಟ್ಟಿದೆ.

               ಕೆನಡಾ ಪ್ರಧಾನಿಯವರ ಆರೋಪದ ಹಿಂದೆಯೇ ಕೆನಡಾದ ಪ್ರಜೆಗಳಿಗೆ ವೀಸಾ ನೀಡುವುದನ್ನು ಭಾರತ ಸ್ಥಗಿತಗೊಳಿಸಿತ್ತು. ಅಲ್ಲದೆ, ದೇಶದಲ್ಲಿರುವ ತನ್ನ ರಾಜತಾಂತ್ರಿಕ ಸಿಬ್ಬಂದಿಯ ಗಾತ್ರವನ್ನು ಕಡಿತಗೊಳಿಸಲು ಸೂಚಿಸಿತ್ತು. ಅದರನುಸಾರ ಕೆನಡಾ ಈಗಾಗಲೇ 41 ರಾಜತಾಂತ್ರಿಕರು ಮತ್ತು ಅವರ ಕುಟುಂಬ ಸದಸ್ಯರನ್ನು ವಾಪಸು ಕರೆಯಿಸಿಕೊಂಡಿದೆ.

           ಆರೋಪ ಸಮರ್ಥಿಸುವ ಸಾಕ್ಷ್ಯ ಎಲ್ಲಿದೆ: ಭಾರತದ ರಾಯಭಾರಿ ಶರ್ಮಾ ಪ್ರಶ್ನೆ ಒಟ್ಟಾವ (ಪಿಟಿಐ): ಕೆನಡಾದ ಸಿಖ್ ಪ್ರತ್ಯೇಕವಾದಿ ನಾಯಕ ಹರ್‌ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಕುರಿತ ತನ್ನ ಆರೋಪಗಳಿಗೆ ಸಾಕ್ಷ್ಯ ಒದಗಿಸಬೇಕು ಎಂದು ಕೆನಡಾದಲ್ಲಿ ಭಾರತದ ರಾಯಭಾರಿ ಆಗ್ರಹಪಡಿಸಿದ್ದಾರೆ. ಗ್ಲೋಬ್‌ ಅಂಡ್‌ ಮೇಲ್ ಪತ್ರಿಕೆಗೆ ಸಂದರ್ಶನದಲ್ಲಿ ಭಾರತದ ರಾಯಭಾರಿ ಸಂಜಯ್‌ ಕುಮಾರ್ ವರ್ಮಾ 'ತನಿಖೆಗೆ ಸಹಕಾರ ನೀಡಲು ನಿರ್ದಿಷ್ಟ ಮಾಹಿತಿಗಳನ್ನೇ ತನಿಖಾಧಿಕಾರಿಗಳು ಒದಗಿಸಿಲ್ಲ' ಎಂದಿದ್ದಾರೆ. 'ಸಾಕ್ಷ್ಯ ಎಲ್ಲಿದೆ ತನಿಖೆ ಅಂತಿಮ ಹಂತಕ್ಕೆ ಬಂದಿದೆಯೇ? ನಾನು ಈಗ ತನಿಖಾ ಪ್ರಕ್ರಿಯೆಗೇ ಕಳಂಕ ತಗುಲಿದೆ ಎಂದು ಹೇಳಬಯಸುತ್ತೇನೆ' ಎಂದು ವರ್ಮಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. 'ನಿಜ್ಜಾರ್ ಹತ್ಯೆ ಹಿಂದೆ ಭಾರತ ಅಥವಾ ಭಾರತೀಯ ಏಜೆಂಟರಿದ್ದಾರೆ' ಎಂದು ಹೇಳಲು ಉನ್ನತ ಮಟ್ಟದ ಕೆಲವರಿಂದ ನಿರ್ದೇಶನವಿರಬಹುದು' ಎಂದರು. ಆದರೆ ವರ್ಮಾ ಯಾರ ಹೆಸರನ್ನು ಉಲ್ಲೇಖಿಸಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries