ಬದಿಯಡ್ಕ: ಕುಂಬಳೆಯ ಆಸ್ಪತ್ರೆಯ ಲಿಫ್ಟ್‍ನೊಳಗೆ ಹತ್ತರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿ, ಬದಿಯಡ್ಕ ಪೋಲೀಸ್ ಠಾಣೆ ವ್ಯಾಪ್ತಿಯ ಪೆರಡಾಲ ನಿವಾಸಿ ಮೊಹಮ್ಮದ್ (52) ಎಂಬಾತನನ್ನು ಕುಂಬಳೆ ಠಾಣೆ ಎಸ್‍ಐ ವಿ.ಕೆ ಅನೀಶ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. 10 ದಿನಗಳ ಹಿಂದೆ ಘಟನೆ ನಡೆದಿದ್ದು, ತಾಯಿಯೊಂದಿಗೆ ಆಸ್ಪತ್ರೆಗೆ ತೆರಳಿದ್ದ ಹತ್ತರ ಹರೆಯದ ಬಾಲಕಿಯನ್ನು ಲಿಫ್ಟ್‍ನೊಳಗೆ ಕರೆದೊಯ್ದು ಕಿರುಕುಳ ನೀಡಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಯೊಬ್ಬರನ್ನು ಕಾಣಲು ಬಾಲಕಿಯೊಂದಿಗೆ ಆಗಮಿಸಿದ್ದರು. ಸನಿಹದಲ್ಲಿ ನಿಂತು ಸಂಬಂಧಿಕರಲ್ಲಿ ಮಾತನಾಡಿ ವಾಪಸಾಗುವಾಗ ಬಾಲಕಿ ನಾಪತ್ತೆಯಾಗಿದ್ದಳು. ನಂತರ ಲಿಫ್ಟ್ ಸನಿಹ ಬಾಲಕಿ ಪತ್ತೆಯಾಗಿದ್ದು, ತನ್ನನ್ನು ಲಿಫ್ಟ್ ತೋರಿಸುವುದಾಗಿ ವ್ಯಕ್ತಿಯೊಬ್ಬ ಕರೆದೊಯ್ದು ದೇಹಮುಟ್ಟಿ ಕಿರಕುಳಕ್ಕೆ ಯತ್ನಿಸಿರುವುದಾಗಿ ತಾಯಿಯಲ್ಲಿ ಬಾಲಕಿ ತಿಳಿಸಿದ್ದಳು. ಆಸ್ಪತ್ರೆಯ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಆರೋಪಿ ಪತ್ತೆ ಸಾಧ್ಯವಾಗಿದೆ. ಸಿಸಿಟಿವಿಯ ಹಾರ್ಡ್ ಡಿಸ್ಕ್ ಅನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.