HEALTH TIPS

ಮಂಜೇಶ್ವರ ಉಪಜಿಲ್ಲಾ ಕಲೋತ್ಸವ: ವೇದಿಕೆಯೇತರ ಸ್ಪರ್ಧೆಗಳ ಆರಂಭ: ಇಂದು ಅಧಿಕೃತ ಉದ್ಘಾಟನೆ ಇಂದು

                  ಕುಂಬಳೆ: ಮಂಜೇಶ್ವರ ಉಪಜಿಲ್ಲಾ 62ನೇ ಶಾಲಾ ಕಲೋತ್ಸವವು ಧರ್ಮತ್ತಡ್ಕದ  ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ಮಂಗಳವಾರ ಆರಂಭಗೊಂಡಿದ್ದು, ನ 10 ರ ತನಕ   ನಡೆಯಲಿದೆ. 

                 ಮಂಗಳವಾರ ವೇದಿಕೆಯೇತರ ರಚನಾ ಸ್ಪರ್ಧೆಗಳು ನಡೆದವು. ಕಥಾ ವಾಚನ,. ಚಿತ್ರರಚನೆ, ಸಂಭಾಷಣಾ ಸ್ಪರ್ಧೆ, ಗದ್ಯ ಓದು, ಏಕಪಾತ್ರಾಭಿನಯ, ಕಥಾ ರಚನೆ, ಕವಿತಾ ರಚನೆ, ಉಪನ್ಯಾಸ ಮೊದಲಾದ ವಿವಿಧ ಸ್ಪರ್ಧೆಗಳು ಮಾಧ್ಯಮಿಕ, ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿ ವಿಭಾಗಗಳಿಗೆ ನಡೆದವು. ಕನ್ನಡ, ಸಂಸ್ಕøತ, ಅರೆಬಿಕ್, ಹಿಂದಿ, ಇಂಗ್ಲೀಷ್ ವಿಷಯಗಳಲ್ಲಿ ಸ್ಪರ್ಧೆಗಳಿದ್ದವು. ಉಪಜಿಲ್ಲೆಯ 120 ಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಭಾಗವಹಿಸುತ್ತಿದ್ದಾರೆ.


          ಉದ್ಘಾಟನೆ ಇಂದು: 

           ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆ ಇಂದು (ನ.8) ನಡೆಯುವುದು. ವಿದ್ಯಾಸಂಸ್ಥೆಗಳ ಕರೆಸ್ಪಾಂಡೆಂಟ್ ಶಾರದಾ ಅಮ್ಮ ಧ್ವಜಾರೋಹಣವನ್ನು ಗೈಯುವರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸುವರು.ಕಾಸರಗೋಡು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಂಜೇಶ್ವರ ಉಪ ವಿದ್ಯಾಧಿಕಾರಿ ಜಿತೇಂದ್ರ ಎಸ್.ಎಚ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಪುತ್ತಿಗೆ ಪಂಚಾಯತಿ ಅಧ್ಯಕ್ಷ  ಸುಬ್ಬಣ್ಣ ಆಳ್ವ, ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ್, ಕಾಸರಗೋಡು ಡಿ.ಡಿ.ಇ ನಂದಿಕೇಶನ್ ಎನ್, ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಎಂ ಎಚ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಚಂದ್ರಾವತಿ ಎಂ, ಗ್ರಾಮ ಪಂಚಾಯತಿ ಸದಸ್ಯರಾದ  ಶಾಂತಿ ವೈ, ಗಂಗಾಧರ, ಆಸಿಫ್ ಅಲಿ ಸಿ.ಎಂ, ಜಯಂತಿ,  ಕಾವ್ಯಶ್ರೀ ಪಿ.ಕೆ, ಇರ್ಶಾನ ಎಸ್, ಪುಷ್ಪಲಕ್ಷ್ಮಿ ಎನ್, ಡಯಟ್ ಪ್ರಾಂಶುಪಾಲ ರಘುರಾಮ ಭಟ್ ಕೆ, ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ , ಎಂ.ಪಿ.ಟಿ.ಎ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ವ್ಯವಸ್ಥಾಪಕ  ಶಂಕರನಾರಾಯಣ ಭಟ್ ಶುಭಾಶಂಸನೆಗೈಯ್ಯುವರು. ಪ್ರಾಂಶುಪಾಲ  ರಾಮಚಂದ್ರ ಭಟ್, ಮುಖ್ಯೋಪಾಧ್ಯಾಯ ಗೋವಿಂದ ಭಟ್ ಉಪಸ್ಥಿತರಿರುವರು. ಸ್ವಾಗತ ಗೀತೆಯೊಂದಿಗೆ ಆರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸಾಂಪ್ರದಾಯಿಕ ಮೆರವಣಿಗೆಗಳೊಂದಿಗೆ ವೇದಿಕೆಗೆ ಸ್ವಾಗತಿಸಲಾಗುವುದು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries