ಕಾಸರಗೋಡು: ಕೇರಳ ಹೈನುಗಾರರ ಕಲ್ಯಾಣ ನಿಧಿ ಮಂಡಳಿಯು ನಡೆಸುವ ಪ್ರಸಕ್ತ ವರ್ಷದ ಶಿಕ್ಷಣ ಧನಸಹಾಯಕ್ಕಾಗಿ ಅರ್ಜಿ ಆಹ್ವಾನಿಸಿದೆ. ಪ್ರಸಕ್ತ ಹೈನುಗಾರಿಕಾ ಸಂಘದಲ್ಲಿ ಹಾಲು ನೀಡುವ ಹೈನುಗಾರರ ಕಲ್ಯಾಣ ನಿಧಿಯ ಸದಸ್ಯರ ಮಕ್ಕಳು ಧನಸಹಾಯಕ್ಕೆ ಅರ್ಹರಾಗಿರುತ್ತಾರೆ. ಎಸ್ಸೆಸೆಲ್ಸಿ, ಪ್ಲಸ್ ಟು, ಗ್ರಾಜುವೇಷನ್, ಪೆÇ್ರಫೆಷನಲ್ ಮುಂತಾದ ಕೋರ್ಸ್‍ಗಳಲ್ಲಿ ಕಲಿಯುವವರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 2022-23 ಶೈಕ್ಷಣಿಕ ವರ್ಷದಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿರಬೇಕು ಮತ್ತು 2023-24 ವರ್ಷದಲ್ಲಿ ಅರ್ಹತಾ ಪ್ರಮಾಣಪತ್ರವನ್ನು ಪಡೆದಿರಬೇಕು. ಅರ್ಜಿದಾರರು ಡಿಸೆಂಬರ್ 2 ರೊಳಗೆ ರೈತರು ಹಾಲು ನೀಡುವ ಹೈನುಗಾರಿಕೆ ಸಂಘದ ಮೂಲಕ ಬ್ಲಾಕ್ ಮಟ್ಟದ ಹೈನುಗಾರಿಕೆ ಅಭಿವೃದ್ಧಿ ಘಟಕದ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.kdfwf.org ಸಂದರ್ಶಿಸಬಹುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 255390)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.