ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ತನ್ನ ಉದ್ಯೋಗಿಗಳಿಗೆ ವಾರದಲ್ಲಿ ಎಲ್ಲಾ ಐದು ದಿನ ಕಚೇರಿಯಿಂದ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದ ನಂತರ, ದೇಶದ ಎರಡನೇ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್, ಕೆಳ ಹಂತದಿಂದ ಮಧ್ಯಮ ಹಂತದ ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ಕಚೇರಿಯಿಂದಲೇ ಕೆಲಸ ಕಡ್ಡಾಯಗೊಳಿಸಿದೆ. ಇನ್ಫೋಸಿಸ್ ಈ ಆದೇಶ ನವೆಂಬರ್ 20 ರಿಂದ ಜಾರಿಗೆ ಬರಲಿದೆ.
ಮಾರ್ಚ್ 2020 ರಿಂದ, ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಮತ್ತು ಕಳೆದ ವರ್ಷ ಏಪ್ರಿಲ್‌ನಲ್ಲಿ ಕಂಪನಿಯು ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಂಡಿತು.
"ಹೈಬ್ರಿಡ್ ಮಾದರಿಯಲ್ಲಿಯೇ ನಮ್ಮ ಕಾರ್ಯಪಡೆಯನ್ನು ಬಲಪಡಿಸಲು ಎಲ್ಲಾ ಉದ್ಯೋಗಿಗಳು ನವೆಂಬರ್ 20, 2023 ರಿಂದ ವಾರಕ್ಕೆ ಮೂರು ದಿನಗಳ ಕಾಲ ಆಯಾ ಕಚೇರಿಗಳಿಂದ ಕೆಲಸ ಮಾಡಬೇಕಾಗುತ್ತದೆ. ಒಂದು ವೇಳೆ ಅವರು ಮೂಲ ಕಚೇರಿಯಲ್ಲಿ ಇಲ್ಲದಿದ್ದರೆ, ಡಿಸೆಂಬರ್ 4, 2023 ರಿಂದ ಜಾರಿಗೆ ಬರುವಂತೆ ಮೂಲ ಸ್ಥಳದಿಂದ ಕೆಲಸ ಮಾಡಲು ಪ್ರಾರಂಭಿಸಬಹುದು ಎಂದು ಇನ್ಫೋಸಿಸ್ ತಿಳಿಸಿದೆ.
"ಜನ ರಿಮೋಟ್ ಆಗಿ ಕೆಲಸ ಮಾಡಲು ಬಯಸುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಜನ ಏನನ್ನು ಯೋಚಿಸುತ್ತಾರೆ ಮತ್ತು ಏನನ್ನು ಬಯಸುತ್ತಾರೆ ಎಂಬುದರ ನಡುವೆ ಸಂಪರ್ಕ ಕಡಿತವಾಗಿದೆ ಎಂದು ಬಿಜ್ ಸ್ಟಾಫಿಂಗ್ ಕಾಮ್ರೇಡ್‌ನ ವ್ಯವಸ್ಥಾಪಕ ಪಾಲುದಾರ ಪುನೀತ್ ಅರೋರಾ ಅವರು ಹೇಳಿದ್ದಾರೆ.