ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಯವರ 109 ನೇ ಜನ್ಮ ದಿನ ವನ್ನು ಆಚರಿಸಲಾಯಿತು. ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನೇತಾರ ಬಡುವನ್ ಕುಂಞÂ ಗೋಳಿಯಡ್ಕ ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಉದ್ಘಾಟಿಸಿದರು.
ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ನೇತಾರರು, ಕಾರ್ಯಕರ್ತರು ಲೋಕಸಭಾ ಚುನಾವಣೆಗೆ ಸಜ್ಜಾಗಲು ಕರೆನೀಡಿದರು ಮಂಡಲ ಉಪಾಧ್ಯಕ್ಷ ಜಗನಾಥ ರೈ, ಕಶರ್Àಕ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಕಡಾರು ಬೀಡು, ಕಾರಡ್ಕ ಬ್ಲಾಕ್ ಕಾರ್ಯದರ್ಶಿ ಶಾಫಿ ಗೊಳಿಯಡ್ಕ, ಮಂಡಲ ಕಾರ್ಯದರ್ಶಿ ಶಾಹುಲ್ ಹಮೀದ್, ಕೇಶವ ಪಾಟಾಳಿ, ಐತಪ್ಪ ಪಟ್ಟಾಜೆ, ರಾಮ ಪಡಿಯಡ್ಪು, ರವೀಂದ್ರ ಕುಂಟಾಲಮೂಲೆ, ಶೆರೀಫ್ ಬಿರ್ಮಿನಡ್ಕ, ಸತೀಶ್ ಮಾನ್ಯ, ನವೀನ್ ರೈ ಪೆರಡಾಲಗುತ್ತು ಮೊದಲಾದವರು ಮಾತಾಡಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ವಿಜೇತರಾಗಿ ಬದಿಯಡ್ಕ ಮಂಡಲ ಸಮಿತಿ ನೂತನ ಅಧ್ಯಕ್ಷರಾಗಿ ಆಯ್ಕೆ ಯಾದ ಕೃಷ್ಣ ಕುಮಾರ್ ಭಟ್, ಬ್ಲಾಕ್ ಕಾರ್ಯದರ್ಶಿಯಾಗಿ ಆಯ್ಕೆಯಾದ ಶಾಫಿ ಪಯ್ಯಲಡ್ಕ ಅವರನ್ನು ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಅಭಿನಂದಿಸಲಾಯಿತು. ಮಂಡಲ ಕಾರ್ಯದರ್ಶಿ ಲೋಹಿತಾಕ್ಷ ಕುಟ್ಟಿಮೂಲೆ ಸ್ವಾಗತಿಸಿ, ಜಗದೀಶ್ ಕಿಳಿಂಗಾರು ವಂದಿಸಿದರು.