ಉಪ್ಪಳ: ಕೇಂದ್ರ ಸರ್ಕಾರ ಜಾರಿ ಮಾಡುವ ಎಲ್ಲಾ ಜನಪರ ಯೋಜನೆಗಳನ್ನು ಬುಡಮೇಲು ಗೊಳಿಸುವುದು, ಹೆಸರು ಬದಲಾಯಿಸಿ ಯೋಜನೆ ಜನತೆಗೆ ಸಿಗದಂತೆ ಮಾಡುವುದು ರಾಜ್ಯ ಸರ್ಕಾರದ ಕುಲಕಸುಬು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ. ಕೆ.ಶ್ರೀ ಕಾಂತ್ ಹೇಳಿದರು.
ಬಿಜೆಪಿ ಪೈವಳಿಕೆ ಉತ್ತರ ವಲಯ ಸಮಿತಿ ಬಾಯಾರು ಪದವಿನಲ್ಲಿ ಹಮ್ಮಿಕೊಂಡ ಜನ ಪಂಚಾಯತ್ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಖಜಾನೆ ಲೂಟಿ ಮಾಡಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ಸಂಬಳ, ಪಿಂಚಣಿ ಸಹಿತ ಯಾವುದೇ ಅನುಕೂಲತೆಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.
ಕೀರ್ತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಂಡಲಾಧ್ಯಕ್ಷ ಆದರ್ಶ್ ಬಿ ಎಂ, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮುಖಂಡರಾದ ಎ ಕೆ ಕಯ್ಯಾರ್, ಮಣಿಕಂಠ ರೈ ಪಟ್ಲ, ಅಶ್ವಿನಿ ಎಂ ಎಲ್, ಹರಿಶ್ಚಂದ್ರ ಎಂ, ಸದಾಶಿವ ಚೇರಾಲ್, ಪ್ರವೀಣ್ ಚಂದ್ರ ಬಲ್ಲಾಳ್, ಚಂದ್ರಾವತಿ, ಜಯಲಕ್ಷ್ಮಿ ಭಟ್, ಪುಷ್ಪ ಉಪಸ್ಥಿತರಿದ್ದರು.
ಗೋಪಾಲ್ ಸಫಲ್ಯ ಸ್ವಾಗತಿಸಿ ಸತ್ಯಶಂಕರ್ ವಂದಿಸಿದರು.