ಜೆರುಸಲೇಂ: ಇಸ್ರೇಲ್ ಪಡೆಗಳು ಹಮಾಸ್ ಆಡಳಿತವಿರುವ ಗಾಜಾ ಪಟ್ಟಿಯ ಮೇಲೆ ಭೂ ಆಕ್ರಮಣ ಮಾಡಿ ಮೇಲುಗೈ ಸಾಧಿಸುತ್ತಿದ್ದಂತೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾ ಪ್ರವೇಶಿಸಿದ್ದಾರೆ.
ಜೆರುಸಲೇಂ: ಇಸ್ರೇಲ್ ಪಡೆಗಳು ಹಮಾಸ್ ಆಡಳಿತವಿರುವ ಗಾಜಾ ಪಟ್ಟಿಯ ಮೇಲೆ ಭೂ ಆಕ್ರಮಣ ಮಾಡಿ ಮೇಲುಗೈ ಸಾಧಿಸುತ್ತಿದ್ದಂತೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾ ಪ್ರವೇಶಿಸಿದ್ದಾರೆ.
ಈ ಮೂಲಕ ಅವರು ಹಮಾಸ್ ವಿರುದ್ಧ ಹೋರಾಡುತ್ತಿರುವ ಸೈನಿಕರನ್ನು ಪ್ರೇರೇಪಿಸುತ್ತಿದ್ದಾರೆ.
'ನಾವಿಲ್ಲಿ ಅಂತ್ಯ ಕಾಣಿಸಲು ಬಂದಿದ್ದೇವೆ. ಅದಿಲ್ಲದೇ ಹೋಗುವುದಿಲ್ಲ. ಹಮಾಸ್ ಬಗ್ಗುಬಡಿಯಬೇಕು, ಒತ್ತೆಯಾಳುಗಳನ್ನು ಬಿಡಿಸಿಕೊಂಡು ಹೋಗಬೇಕು ಎಂಬುದೇ ನಮ್ಮ ಗುರಿ' ಎಂದು ಪ್ರಧಾನಿ ಹೇಳಿದ್ದಾರೆ. ಪ್ರಧಾನಿ ಅವರಿಗೆ ಈ ವೇಳೆ ಇಸ್ರೇಲ್‌ನ ಸೇನಾಪಡೆಗಳ ಉನ್ನತ ಅಧಿಕಾರಿಗಳು ಸಾಥ್ ಕೊಟ್ಟರು.
ಈ ಮಧ್ಯೆ ವೆಸ್ಟ್‌ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ರೇಲ್ ಸೇನೆಯು ಕಳೆದ 24 ಗಂಟೆಗಳಲ್ಲಿ ಬಾಲಕ ಸೇರಿದಂತೆ ಕನಿಷ್ಠ ಎಂಟು ಮಂದಿ ಪ್ಯಾಲೆಸ್ಟೀನಿಯರನ್ನು ಹತ್ಯೆ ಮಾಡಿದ್ದಾರೆ.
ಅಲ್ಲದೇ ಇಸ್ರೇಲ್ ಜೊತೆಗೆ ನಡೆದ ಯುದ್ಧದಲ್ಲಿ ತನ್ನ ಸೇನಾ ಪಡೆಯ ಉನ್ನತ ಕಮಾಂಡರ್ ಅಹ್ಮದ್ ಅಲ್ ಘಂಡೌರ್ ಮತ್ತು ಇತರೆ ನಾಲ್ವರು ನಾಯಕರು ಹತರಾಗಿದ್ದಾರೆ ಎಂದು ಹಮಾಸ್ ಭಾನುವಾರ ಪ್ರಕಟಿಸಿದೆ.
ಕದನವಿರಾಮ ಒಪ್ಪಂದದಂತೆ ಹಮಾಸ್‌ನ ಬಂಡುಕೋರರು ಭಾನುವಾರ 14 ಇಸ್ರೇಲಿ ಒತ್ತೆಯಾಳುಗಳು, ಮೂವರು ವಿದೇಶಿ ಪ್ರಜೆಗಳನ್ನು ಬಿಡುಗಡೆ ಮಾಡಿದ್ದರು.