ಕೋಝಿಕ್ಕೋಡ್: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಸಚಿವರು ಭಾಗವಹಿಸುವ ನವ ಕೇರಳ ಸಮಾವೇಶಕ್ಕೆ ಮಾವೋವಾದಿಗಳು ಬೆದರಿಕೆ ಹಾಕಿದ್ದಾರೆ.
ವಯನಾಡ್ ದಳಂ ಪರವಾಗಿ ಕೋಝಿಕ್ಕೋಡ್ ಜಿಲ್ಲಾಧಿಕಾರಿಗೆ ಬೆದರಿಕೆ ಪತ್ರ ಬಂದಿದೆ.
ನಕ್ಸಲರನ್ನು ಕೊಲ್ಲುವ ಮೂಲಕ ಪಿಣರಾಯಿ ಸÀರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಬೆದರಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಕೋಝಿಕ್ಕೋಡ್‍ನ ನವಕೇರಳ ಸಮಾವೇಶ ನಡೆಯುವ ಸ್ಥಳದಲ್ಲಿಯೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಘಟನೆ ಕುರಿತು ಪೋಲೀಸರು ತನಿಖೆ ಆರಂಭಿಸಿದ್ದಾರೆ. ಜಿಲ್ಲಾಧಿಕಾರಿ ಪತ್ರವನ್ನು ಪೆÇಲೀಸರಿಗೆ ಹಸ್ತಾಂತರಿಸಿದರು. ವಯನಾಡಿನಲ್ಲಿ ಈ ಹಿಂದೆ ಕಳುಹಿಸಲಾಗಿದ್ದ ಬೆದರಿಕೆ ಪತ್ರಕ್ಕಿಂತ ಕೈಬರಹ ವಿಭಿನ್ನವಾಗಿದೆ ಎಂದು ಪೆÇಲೀಸರು ಹೇಳಿದ್ದಾರೆ.
ವಯನಾಡು ಜಿಲ್ಲೆಯ ಪ್ರವಾಸ ಮುಗಿಸಿ ಶುಕ್ರವಾರದಿಂದ ಮೂರು ದಿನಗಳ ಕಾಲ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನವಕೇರಳ ಸಮಾವೇಶ ನಡೆಯುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಬೆಳಗ್ಗೆ ವಡಕರದಲ್ಲಿ ವಡಕರ, ನಾದಪುರಂ, ಕುಟ್ಯಾಡಿ ಮತ್ತು ಪೆರಂಬ್ರಾ ಕ್ಷೇತ್ರಗಳ ಆಹ್ವಾನಿತ ಅತಿಥಿಗಳನ್ನು ಭೇಟಿ ಮಾಡಿದರು. ವಡಕರ ನಾರಾಯಣನಗರ ಮೈದಾನದಲ್ಲಿ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯನ್ನೂ ನಡೆಸಿದರು.
ಬೆಳಗ್ಗೆ 11 ಗಂಟೆಗೆ ಕಲ್ಲಾಚಿ ಮರಂವೀಟಿಲ್ ಮೈದಾನದಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಪೆರಂಬ್ರಾ ಹೈಯರ್ ಸೆಕೆಂಡರಿ ಶಾಲಾ ಮೈದಾನದಲ್ಲಿ ಪೇರಂಬ್ರಾ ಮಂಡಲ ಸಮಾವೇಶ ನಡೆಯಿತು. ಕುತ್ಯಾಡಿ ಮಂಡಲದ ನವಕೇರಳ ಸಮಾವೇಶ ಸಂಜೆ 4.30ಕ್ಕೆ ಮೇಮುಂಡ ಹೈಯರ್ ಸೆಕೆಂಡರಿ ಶಾಲಾ ಮೈದಾನದಲ್ಲಿ ಹಾಗೂ ವಡಕರ ಮಂಡಲದಲ್ಲಿ ನಾರಾಯಣ ನಗರ ಮೈದಾನದಲ್ಲಿ ನಡೆಯಿತು.