ಕೊಚ್ಚಿ: ಕಿಫ್ಬಿ ಮಸಾಲಾ ಬಾಂಡ್ ಪ್ರಕರಣದಲ್ಲಿ ಮಾಜಿ ಸಚಿವ ಥಾಮಸ್ ಐಸಾಕ್ ಹಾಗೂ ಇತರರಿಗೆ ಸಮನ್ಸ್ ಕಳುಹಿಸಲು ಇಡಿಗೆ ಹೈಕೋರ್ಟ್ ಅನುಮತಿ ನೀಡಿದೆ.
ಐಸಾಕ್‍ಗೆ ಸಮನ್ಸ್ ಕಳುಹಿಸದಂತೆ ಮಧ್ಯಂತರ ಆದೇಶ ಇದೀಗ ಬದಲಾಯಿಸಲಾಗಿದೆ.
ಮಸಾಲಾ ಬಾಂಡ್ ನಲ್ಲಿ ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ರಿಸರ್ವ್ ಬ್ಯಾಂಕ್ ಅನುಮತಿ ಪಡೆದಿಲ್ಲ ಎಂಬುದು ಜಾರಿ ನಿರ್ದೇಶನಾಲಯದ ವಾದ.
ಈ ಹಿಂದೆ ನ್ಯಾಯಾಲಯವು ತನಿಖೆಯನ್ನು ಮುಂದುವರಿಸುವಂತೆ ಇಡಿಗೆ ಸೂಚಿಸಿತ್ತು. ಹೊಸ ಸಮನ್ಸ್ ಕಳುಹಿಸಲು ಸಿದ್ಧ ಎಂದು ಇಡಿ ತಿಳಿಸಿರುವ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ನೀಡಲಾಗಿದೆ.ಮಸಾಲಾ ಬಾಂಡ್ ನಲ್ಲಿ ಇಡಿ ಸಮನ್ಸ್ ವಿರುದ್ಧ ಥಾಮಸ್ ಐಸಾಕ್ ಹಾಗೂ ಕಿಫ್ಬಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಇಡಿ ತನಿಖೆಯ ಹೆಸರಿನಲ್ಲಿ ಸಮನ್ಸ್ ಜಾರಿ ಮಾಡುವ ಮೂಲಕ ತೊಂದರೆ ನೀಡುತ್ತಿದೆ ಎಂದು ಥಾಮಸ್ ಐಸಾಕ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಿಫ್ಬಿ ಸಿಇಒ ಕೆ.ಎಂ.ಅಬ್ರಹಾಂ ಮತ್ತು ಜಂಟಿ ನಿಧಿ ವ್ಯವಸ್ಥಾಪಕಿ ಆನಿ ಜೂಲಾ ಥಾಮಸ್ ಕೂಡ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.