ನವದೆಹಲಿ: ಭಾರತದಲ್ಲಿ 11 ಲಕ್ಷ ಮಕ್ಕಳು 2022ರಲ್ಲಿ ದಡಾರ ಲಸಿಕೆಯ ಮೊದಲ ಡೋಸ್‌ನಿಂದ ವಂಚಿತರಾಗಿದ್ದಾರೆ ಎಂಬ ಮಾಧ್ಯಮಗಳ ವರದಿಯು ನಿಖರವಲ್ಲದ, ದೋಷಯುಕ್ತ ಮಾಹಿತಿ ಎಂದು ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ತಿಳಿಸಿದೆ.
ನವದೆಹಲಿ: ಭಾರತದಲ್ಲಿ 11 ಲಕ್ಷ ಮಕ್ಕಳು 2022ರಲ್ಲಿ ದಡಾರ ಲಸಿಕೆಯ ಮೊದಲ ಡೋಸ್‌ನಿಂದ ವಂಚಿತರಾಗಿದ್ದಾರೆ ಎಂಬ ಮಾಧ್ಯಮಗಳ ವರದಿಯು ನಿಖರವಲ್ಲದ, ದೋಷಯುಕ್ತ ಮಾಹಿತಿ ಎಂದು ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಅಮೆರಿಕದ 'ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ(ಸಿಡಿಸಿ)' ಮಾಹಿತಿ ಆಧರಿಸಿ ಹಲವು ಮಾಧ್ಯಮಗಳು ದಡಾರ ಲಸಿಕೆ ಕುರಿತು ವರದಿ ಪ್ರಕಟಿಸಿದ್ದವು.
'ಈ ವರದಿಗಳು ಸತ್ಯಾಂಶವನ್ನು ಆಧರಿಸಿಲ್ಲ. ನೈಜ ಚಿತ್ರಣವನ್ನು ವರದಿಗಳು ಬಿಂಬಿಸುತ್ತಿಲ್ಲ. ಇವೆಲ್ಲವೂ 2022ರ ಜನವರಿ 1ರಿಂದ 2022ರ ಡಿಸೆಂಬರ್ ನಡುವಿನ ಡಬ್ಲ್ಯುಎಚ್‌ಒ ಮತ್ತು ಯುನಿಸೆಫ್‌ನ 'ರಾಷ್ಟ್ರೀಯ ಲಸಿಕೀಕರಣ ವರದಿ 2022'ರನ್ನು ಆಧರಿಸಿವೆ' ಎಂದು ಸರ್ಕಾರ ಹೇಳಿದೆ.
'ಭಾರತದಲ್ಲಿ 2022ರ ಏಪ್ರಿಲ್‌ನಿಂದ 2023ರ ಮಾರ್ಚ್ ನಡುವಿನ ಅವಧಿಯಲ್ಲಿ 2,63,84,580 ಮಕ್ಕಳ ಪೈಕಿ 2,63,63,270 ಮಕ್ಕಳಿಗೆ ದಡಾರ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಲಸಿಕೆ ವಂಚಿತರಾದ ಮಕ್ಕಳು ಕೇವಲ 21,310 ಮಾತ್ರ ಎಂದು ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್‌ಎಂಐಎಸ್) ತಿಳಿಸಿದೆ' ಎಂದು ಕೇಂದ್ರ ಸರ್ಕಾರ ತನ್ನ ಪ್ರಕಟಣೆಯಲ್ಲಿ ಹೇಳಿದೆ.
'ಇದರ ಜತೆಗೆ ಲಸಿಕೆ ಪಡೆಯದ, ಭಾಗಶಃ ಲಸಿಕೆ ಪಡೆದ ಮಕ್ಕಳಿಗೆ ತಪ್ಪಿಹೋಗಿರುವ ಡೋಸ್‌ಗಳನ್ನು ಹಾಕಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸೇರಿ ಹಲವು ಕ್ರಮಗಳನ್ನು ಕೈಗೊಂಡಿದೆ' ಎಂದೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.