ಕಣ್ಣೂರು: ನಕ್ಸಲ್ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿರುವ ಹಿನ್ನೆಲೆಯಲ್ಲಿ ಪೋಲೀಸ್ ಥಂಡರ್ ಬೋಲ್ಟ್ ತಂಡ ಅರಣ್ಯ ಪ್ರದೇಶದಲ್ಲಿ ತಪಾಸಣೆಯನ್ನು ಬಿಗಿಗೊಳಿಸಿದೆ.
ಅರಣ್ಯ ಪ್ರದೇಶವನ್ನು ಪರಿಶೀಲಿಸಲು ಹೆಲಿಕಾಪ್ಟರ್ ಅನ್ನು ಬಳಸಲಾಗುತ್ತಿದೆ. ಕಣ್ಣೂರು, ವಯನಾಡು ಮತ್ತು ಕೋಯಿಕ್ಕೋಡ್ ಜಿಲ್ಲೆಗಳ ಅರಣ್ಯ ವಲಯದಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ. ಥಂಡರ್ಬೋಲ್ಟ್ ಮತ್ತು ಪೋಲೀಸರು ಪ್ರದೇಶದಲ್ಲಿ ಜಂಟಿ ಶೋಧ ನಡೆಸುತ್ತಿದ್ದಾರೆ.
ಸದ್ಯ ಕೋಝಿಕ್ಕೋಡ್ ಜಿಲ್ಲೆಯ ಕೆಳಕಂ, ಕೊಟ್ಟಿಯೂರ್, ಕಂಬಮಾಲ, ಮಖಿಮಲ ಹಾಗೂ ಗಡಿ ಭಾಗಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ.