ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿವಾಹಿನಿಯ ನೇತೃತ್ವದಲ್ಲಿ ಭತ್ತದ ಭಕ್ತಿ ಶ್ರೀರಾಮ ನೈವೇದ್ಯಕ್ಕಾಗಿ ಕಾನತ್ತಿಲ ಗದ್ದೆಯಲ್ಲಿ ಮಾಡಿದ ಭತ್ತದ ಬೆಳೆಯನ್ನು ಕೊಯ್ಲು ಮಾಡುವ ಕಾರ್ಯ ಭಾನುವಾರ ಜರಗಿತು. ವಿದ್ಯಾರ್ಥಿ ವಾಹಿನಿ ಪ್ರಮುಖ ಶ್ಯಾಮಪ್ರಸಾದ ಕುಳಮರ್ವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ವೈ.ವಿ.ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು, ಸುಬ್ರಹ್ಮಣ್ಯ ಕೆರೆಮೂಲೆ, ಸರಳಿ ಮಹೇಶ, ರಾಜಗೋಪಾಲ ಭಟ್ ಕಾನತ್ತಿಲ, ನಾರಾಯಣ ಭಟ್ ಕಾನತ್ತಿಲ, ಕೇಶವಪ್ರಸಾದ ಎಡೆಕ್ಕಾನ, ವಿಷ್ಣುಪ್ರಸಾದ ಕೋಳಾರಿ, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.
ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನಿತ್ಯ ಪೂಜಿಸುವ ಶ್ರೀರಾಮಚಂದ್ರಮೌಳೀಶ್ವರ ದೇವರ ನೈವೇದ್ಯಕ್ಕಾಗಿ ಈ ಭತ್ತದಿಂದ ಮಾಡಿದ ಅಕ್ಕಿಯನ್ನು ಉಪಯೋಗಿಸಲಾಗುತ್ತಿದೆ. ಸಂಪೂರ್ಣ ಸಾವಯವ ರೀತಿಯಲ್ಲಿ ಕೃಷಿ ಮಾಡಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಇದೇ ರೀತಿ ವಿವಿಧ ವಲಯ, ಮಂಡಲಗಳ ನೇತೃತ್ವದಲ್ಲಿ ಭತ್ತದ ಕೃಷಿಯನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.