ಕಾಸರಗೋಡು: ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದಲ್ಲಿ ಜಿಲ್ಲಾ ಕೌಶಲ್ಯ ಸಮಿತಿ ಸಭೆ ನಡೆಯಿತು. ಈ ಹಿಂದೆ ನಡೆದ ಸಭೆಯ ತೀರ್ಮಾನ ಪ್ರಕಾರ ವಿವಿಧ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಮೌಲ್ಯಮಾಪನ ನಡೆಸಲಾಯಿತು.
ಜಿಲ್ಲಾ ಕೌಶಲ್ಯ ಸಂಯೋಜಕ ಎಂ.ಜಿ.ನಿದಿನ್ ಅವರು ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು ಜಾರಿಗೊಳಿಸಿರುವ ಕೇಂದ್ರ ಮತ್ತು ರಾಜ್ಯ ಉದ್ಯೋಗ ಕೌಶಲ್ಯ ಯೋಜನೆಗಳ ಕುರಿತು ಪ್ರಸ್ತುತಪಡಿಸಿದರು. ವಿವಿಧ ಇಲಾಖೆಗಳು ಜಿಲ್ಲೆಯಲ್ಲಿ ನಡೆಸಿದ ಉದ್ಯೋಗ ಮೇಳಗಳ ಅವಲೋಕನ ಮಾಡಲಾಯಿತು. ಈ ಸಂದರ್ಭ ಪ್ರಮುಖ ಉದ್ಯೋಗದಾತರನ್ನು ಒಳಗೊಂಡ ಉದ್ಯೋಗ ಮೇಳವನ್ನು ವ್ಯಾಪಕವಾಗಿ ನಡೆಸುವ ಮೂಲಕ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವಾಗ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ ಅವರ ಅಭಿಪ್ರಾಯ ಪಡೆಯಲು ಸಭೆ ನಿರ್ಧರಿಸಿತು. ಜಿಲ್ಲಾಧಿಕಾರಿಯ ಚೇಂಬರಿನಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಮುಖ್ಯಸ್ಥರು ಭಾಗವಹಿಸಿದ್ದರು. ಜಿಲ್ಲಾ ಪ್ಲಾನಿಂಗ್ ಆಫೀಸರ್ ಟಿ.ರಾಜೇಶ್ ಸ್ವಾಗತಿಸಿದರು.