ಕಾಸರಗೋಡು: ರಾಜ್ಯ ಸರ್ಕಾರದ ಸಾರ್ವಜನಿಕ ವಲಯ ಸಂಸ್ಥೆಯಾದ ಕೆಲ್ಟ್ರಾನ್‍ನ ಪೆÇೀಸ್ಟ್ ಗ್ರಾಜುವೇಟ್ ಡಿಪೆÇ್ಲೀಮಾ ಇನ್ ಜರ್ನಲಿಸಂ ಕೋರ್ಸ್‍ಗೆ ನವೆಂಬರ್ 18 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು.
ಕೋಯಿಕ್ಕೋಡ್ ಮತ್ತು ತಿರುವನಂತಪುರ ಕೇಂದ್ರಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪತ್ರಿಕೆ, ದೂರದರ್ಶನ, ಸಾಮಾಜಿಕ ಮಾಧ್ಯಮ ಮತ್ತು ಕೃತಕ ಬುದ್ಧಿಮತ್ತೆಯನ್ನು ಆಧರಿಸಿದ ಪತ್ರಿಕೋದ್ಯಮ, ಮೊಬೈಲ್ ಜರ್ನಲಿಸಂ, ಆಂಕರಿಂಗ್, ನ್ಯೂಸ್ ಕ್ಯಾಮೆರಾ, ವಿಡಿಯೋ ಎಡಿಟಿಂಗ್ ಮುಂತಾದವುಗಳಲ್ಲಿ ತರಬೇತಿ ನೀಡಲಾಗುತ್ತದೆ. ಷರತ್ತುಗಳಿಗೆ ಒಳಪಟ್ಟು ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್‍ಶಿಪ್ ಮಾಡಲು ಅವಕಾಶವಿರುತ್ತದೆ.
ಗರಿಷ್ಠ ವಯೋಮಿತಿ 30 ವರ್ಷ ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9544958182 ಸಂಪರ್ಕಿಸಬಹುದಾಗಿದೆ. ಕೆಲ್ಟ್ರಾನ್ ನಾಲೆಡ್ಜ್ ಸೆಂಟರ್, ಮೂರನೇ ಮಹಡಿ, ಅಂಬೇಡ್ಕರ್ ಬಿಲ್ಡಿಂಗ್, ರೈಲ್ವೆ ಸ್ಟೇಷನ್ ಲಿಂಕ್ ರೋಡ್, ಕೋಝಿಕ್ಕೋಡ್ 673 002. ವಿಳಾಸ ಕೆಲ್ಟ್ರಾನ್ ನಾಲೆಡ್ಜ್ ಸೆಂಟರ್, ಎರಡನೇ ಮಹಡಿ, ಚೆಂಬಿಕ್ಕಲಂ ಬಿಲ್ಡಿಂಗ್, ಬೇಕರಿ ಜಂಕ್ಷನ್, ವಳುತಕ್ಕಾಡ್, ತಿರುವನಂತಪುರಂ 695 014 ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.