ಕಾಸರಗೋಡು: ಕೇರಳ ಸ್ಟೇಟ್ ಸರ್ವೀಸ್ ಪೆನ್ಶನರ್ಸ್ ಅಸೋಸಿಯೇಶನ್(ಕೆ.ಎಸ್.ಎಸ್.ಪಿ.ಎ)ಕಾಸರಗೋಡು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕೇರಳ ರಾಜ್ಯೋತ್ಸವ ದಿನಾಚರಣೆಯಂದು ಸಕಾರದ ವಿರುದ್ಧ'ವಂಚನಾ ದಿನ'ವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಉಪ ಖಜಾನೆ ಎದುರು ಪ್ರತಿಭಟನಾ ಧರಣಿ ಮತ್ತು ವಿಷದೀಕರಣ ಸಭೆ ನಡೆಯಿತು. ತುಟ್ಟಿಬತ್ತೆ ತಕ್ಷಣ ವಿತರಿಸಬೇಕು, ಪಿಂಚಣಿ ಪರಿಷ್ಕøತ ವೇತನ ತಕ್ಷಣ ವಿತರಿಸಬೇಕು, ವೇತನ ಪರಿಷ್ಕರಣಾ ವೇತನ ಆಯೋಗ ರಚಿಸಬೇಕು, ಆರೋಗ್ಯ ವಿಮೆಯ ಸಮಸ್ಯೆ ಪರಿಹರಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.
ಜಿಲ್ಲಾ ಸಮಿತಿ ಜತೆ ಕಾರ್ಯದರ್ಶಿ ಪುರುಷೋತ್ತಮನ್ ಕಾಡಗಂ ಸಮಾರಂಭ ಉದ್ಘಾಟಿಸಿದರು. ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಕೆ.ವಿ. ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಪಿ.ಶಶಿಧರನ್, ಎಂ.ನಾರಾಯಣ, ಸೀತಾರಾಮ ಮಲ್ಲಂ, ಆಚೇರಿ ಬಾಲಕೃಷ್ಣನ್, ಕೆ.ವಿ.ಜೋಶಿ, ಪುರುಷೋತ್ತಮನ್ ಅಡ್ಕಂ, ಮುರಳಿಕೃಷ್ಣನ್ ಪಿ.ಕೆ., ಬಾಲಕೃಷ್ಣನ್ ಕೊಟ್ಟಂಗುಳಿ, ಎಂ. ಕೇಶವನ್, ಅಬ್ದುಲ್ ರಝಾಕ್, ಕೆ.ಎಂ.ಚಂದುಕುಟ್ಟಿ ಮೊದಲಾದವರು ಉಪಸ್ಥೀತರಿದ್ದರು. ಜತೆ ಕಾರ್ಯದರ್ಶಿ ಇ.ಮಾಧವನ್ ಸ್ವಾಗತಿದರು. ಕೆ.ವಿ. ಮುಕುಂದನ್ ವಂದಿಸಿದರು.