ವಾಷಿಂಗ್ಟನ್: 'ಭಾರತವು ಎಂದಿಗೂ ಅಮೆರಿಕದ ಕಾರ್ಯತಂತ್ರ ಪಾಲುದಾರಿಕೆ ರಾಷ್ಟ್ರವಾಗಿಯೇ ಇರಲಿದ್ದು, ಅದು ಜಗತ್ತಿನ ಯಾವುದೇ ಬಿಕ್ಕಟ್ಟಿನ ಕುರಿತು ತೀರ್ಮಾನ ಕೈಗೊಳ್ಳಲು ಅದು ಮುಕ್ತವಾಗಿದೆ' ಎಂದು ಶ್ವೇತಭವನ ಹೇಳಿದೆ.
ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರ ಸಂವಹನೆಯಲ್ಲಿ ಸಂಯೋಜಕ ಜಾನ್ ಕಿರ್ಬಿ ಈ ಮಾತು ಹೇಳಿದ್ದಾರೆ.
'ಮಧ್ಯಪ್ರಾಚ್ಯ ಭಾಗದ ಬಿಕ್ಕಟ್ಟು ನಿವಾರಿಸಲು ಭಾರತದ ಯಾವುದೇ ಯತ್ನವನ್ನು ಆ ದೇಶವು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಜೊತೆಗೆ ಹೊಂದಿರುವ ಬಾಂಧವ್ಯದ ದೃಷ್ಟಿಕೋನದಿಂದಲೇ ನೋಡಲಿದೆ ಎಂದು ಹೇಳಿದರು.
'ಭಾರತವು ಅಮೆರಿಕದ ಮುಖ್ಯ ಕಾರ್ಯತಂತ್ರ ರಾಷ್ಟ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಅದನ್ನು ನೀವು ಗಮನಿಸಿದ್ದೀರಿ' ಎಂದು ಕಿರ್ಬಿ ಶ್ವೇತಭವನದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಜಗತ್ತಿನ ಯಾವುದೇ ಬಿಕ್ಕಟ್ಟಿನ ಕುರಿತು ನಿಲುವು ಏನಿರಬೇಕು ಎಂಬುದನ್ನು ತೀರ್ಮಾನಿಸುವ ವಿವೇಚನೆಯು ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರದ್ದೆ ಆಗಿದೆ' ಎಂದು ಪ್ರತಿಕ್ರಿಯಿಸಿದರು.
'ಇಸ್ರೇಲ್‌ನ ವಿವಿಧ ನಗರಗಳ ಮೇಲೆ ಹಮಾಸ್ ನಡೆಸಿದ್ದ ದಾಳಿಯನ್ನು ಭಾರತವು ಭಯೋತ್ಪಾದನಾ ಕೃತ್ಯಕ್ಕೆ ಹೋಲಿಸಿದೆ. ಅದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಾನವೀಯ ಕಾಯ್ದೆ ನಿಯಮಗಳಿಗೆ ಎಲ್ಲ ರಾಷ್ಟ್ರಗಳು ಬದ್ಧರಾಗಿರಬೇಕು' ಎಂದು ಪ್ರತಿಪಾದಿಸಿದೆ.