ಚೆನ್ನೈ: ರಾಜ್ಯಪಾಲ ಆರ್.ಎನ್. ರವಿ ಅವರು ಅಂಕಿತ ಹಾಕಲು ನಿರಾಕರಿಸಿ ವಾಪಸ್ ಕಳುಹಿಸಿರುವ ಮಸೂದೆಗಳನ್ನು ಮತ್ತೆ ಅಂಗೀಕರಿಸಲು ನವೆಂಬರ್ 18ರಂದು ತಮಿಳುನಾಡು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ.
ಚೆನ್ನೈ: ರಾಜ್ಯಪಾಲ ಆರ್.ಎನ್. ರವಿ ಅವರು ಅಂಕಿತ ಹಾಕಲು ನಿರಾಕರಿಸಿ ವಾಪಸ್ ಕಳುಹಿಸಿರುವ ಮಸೂದೆಗಳನ್ನು ಮತ್ತೆ ಅಂಗೀಕರಿಸಲು ನವೆಂಬರ್ 18ರಂದು ತಮಿಳುನಾಡು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ.
ತಿರುವಣ್ಣಾಮಲೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭಾ ಅಧ್ಯಕ್ಷ ಎಂ. ಅಪ್ಪಾವು, 'ರಾಜ್ಯಪಾಲರು ಮಸೂದೆಗಳಿಗೆ ಒಪ್ಪಿಗೆ ನೀಡಿಲ್ಲ.
12 ಮಸೂದೆಗಳು, ನಾಲ್ಕು ಸರ್ಕಾರಿ ಆದೇಶಗಳು ಸೇರಿದಂತೆ 52 ಕೈದಿಗಳನ್ನು ಅವಧಿಪೂರ್ಣ ಬಿಡುಗಡೆಗೆ ಸಂಬಂಧಿಸಿದ ಪ್ರಸ್ತಾವವು ರಾಜ್ಯಪಾಲರ ಒಪ್ಪಿಗೆಗೆ ರಾಜಭವನದಲ್ಲಿ ಕಾದುಕುಳಿತಿದೆ.
ರಾಜ್ಯಪಾಲರ ಈ ವಿಳಂಬ ಧೋರಣೆ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು, 'ರಾಜ್ಯಪಾಲರ ನಡೆಯು ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದೆ' ಎಂದು ಹೇಳಿತ್ತು.