ನವದೆಹಲಿ: 'ಸಿಲ್ಕ್ಯಾರಾ' ಸುರಂಗ ಕಾರ್ಮಿಕರ ರಕ್ಷಣೆಯು ತಂಡದ ಕಾರ್ಯಕ್ಕೆ ಅತ್ಯುತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ನವದೆಹಲಿ: 'ಸಿಲ್ಕ್ಯಾರಾ' ಸುರಂಗ ಕಾರ್ಮಿಕರ ರಕ್ಷಣೆಯು ತಂಡದ ಕಾರ್ಯಕ್ಕೆ ಅತ್ಯುತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಈ ಕಾರ್ಯದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರು ತಂಡದ ಕಾರ್ಯ ಮತ್ತು ಮಾನವೀಯತೆಗೆ ಉದಾಹರಣೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ, ರಕ್ಷಿಸಲಾದ ಕಾರ್ಮಿಕರ ಜೊತೆಗೂ ದೂರವಾಣಿಯಲ್ಲಿ ಮಾತನಾಡಿದ ಅವರ ಆರೋಗ್ಯವನ್ನು ವಿಚಾರಿಸಿದರು. ಬಹು ಏಜೆನ್ಸಿಗಳು ಭಾಗಿಯಾಗಿದ್ದ ಈ ರಕ್ಷಣಾ ಕಾರ್ಯಾಚರಣೆಯು ಎಲ್ಲರನ್ನು ಭಾವನಾತ್ಮಕವಾಗಿಸಿತ್ತು ಎಂದು ಹೇಳಿದ್ದಾರೆ.
'ಎಕ್ಸ್' ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿರುವ ಅವರು, ಸುರಂಗದಲ್ಲಿ ಸಿಕ್ಕಿಬಿದ್ದಿದ್ದ 41 ಕಾರ್ಮಿಕ ತಾಳ್ಮೆ ಹಾಗೂ ಧೈರ್ಯ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಉತ್ತಮ ಆರೋಗ್ಯ ಅವರಿಗೆ ಲಭಿಸಲಿ ಎಂದು ಆಶಿಸಿದ್ದಾರೆ.