ಬದಿಯಡ್ಕ: ಎಡನೀರು ಸಮೀಪದ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಮಹಾಸಭೆ ಇತ್ತೀಚೆಗೆ ಎಡನೀರು ಶ್ರೀ ಮಠದಲ್ಲಿ ಜರಗಿದ್ದು, ಪೂಜ್ಯ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳು ಆಶೀರ್ವಚನವನ್ನು ನೀಡಿ ಕ್ಷೇತ್ರ ನಿರ್ಮಾಣಕಾರ್ಯದಲ್ಲಿ ಎಲ್ಲರ ಸಹಕಾರ ಅಗತ್ಯವೆಂದು ತಿಳಿಸಿದರು.
ನವೀನ ಕುಮಾರ ಭಟ್ ಕುಂಜರಕಾನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ನಿರ್ಮಾಣದ ಮುಂದಿನ ಹಂತದ ವಿವರಗಳನ್ನು ತಿಳಿಸಿದರು. ಕೆ.ವಿ.ಬಾಲಕೃಷ್ಣ ಆಚಾರಿ, ಗೋಪಾಲ ಮಾಸ್ತರ್ ಎಡನೀರು, ರಾಜನ್ ಮುಳಿಯಾರ್ ಮಾತನಾಡಿದರು. ವಾಸುದೇವ ಭಟ್ ಚೂರಿಮೂಲೆ, ಶಾರದಾ ಟೀಚರ್ ಎಡನೀರು ಸಭೆಯಲ್ಲಿ ಉಪಸ್ಥಿತರಿದ್ದರು. ಕೆ.ಯಂ ಶರ್ಮ ಎಡನೀರು ಪ್ರಾಸ್ತಾವಿಕ ಮಾತುಗಳನ್ನಾಡಿ ನಿರೂಪಿಸಿದರು. ಸರಿತಾ ಪಾಲೆಕ್ಕಾಲ್ ಸಮಿತಿಯ ವಾರ್ಷಿಕ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಊರ ಪರವೂರ ಎಲ್ಲಾ ಭಕ್ತ ಜನರು ಜೀರ್ಣೋದ್ಧಾರ ನಿಧಿ ಕೂಪನ್ ಪಡೆದುಕೊಳ್ಳಬೇಕೆಂದು ಹಾಗೂ ಕ್ಷೇತ್ರ ನಿರ್ಮಾಣದಲ್ಲಿ ಸಹಕರಿಸಬೇಕೆಂದು ವಿನಂತಿಸಲಾಯಿತು. ಪ್ರಶಾಂತ ಕಲ್ಲುಗದ್ದೆ ಪ್ರಾರ್ಥನೆ ಹಾಡಿದರು. ಸತೀಶ ಕೆಮ್ಮಂಗಯ ಸ್ವಾಗತಿಸಿದರು.