ಕೋಲ್ಕತ್ತ: ಕಲ್ಕತ್ತಾ ಹೈಕೋರ್ಟ್‌ನಿಂದ ಪಟ್ನಾ ಹೈಕೋರ್ಟ್‌ಗೆ ವರ್ಗವಾಗಿರುವ ನ್ಯಾಯಮೂರ್ತಿ ಬಿಬೇಕ್ ಚೌಧುರಿ ಅವರು ತಮ್ಮ ವರ್ಗಾವಣೆಯು, 'ಅಧಿಕಾರವು ಕಾರ್ಯಾಂಗದಿಂದ ನ್ಯಾಯಾಂಗದೆಡೆಗೆ ವರ್ಗವಾಗುತ್ತಿರುವುದರ' ಆರಂಭಿಕ ಸೂಚನೆ ಎಂದು ಹೇಳಿದ್ದಾರೆ.
ಕೋಲ್ಕತ್ತ: ಕಲ್ಕತ್ತಾ ಹೈಕೋರ್ಟ್‌ನಿಂದ ಪಟ್ನಾ ಹೈಕೋರ್ಟ್‌ಗೆ ವರ್ಗವಾಗಿರುವ ನ್ಯಾಯಮೂರ್ತಿ ಬಿಬೇಕ್ ಚೌಧುರಿ ಅವರು ತಮ್ಮ ವರ್ಗಾವಣೆಯು, 'ಅಧಿಕಾರವು ಕಾರ್ಯಾಂಗದಿಂದ ನ್ಯಾಯಾಂಗದೆಡೆಗೆ ವರ್ಗವಾಗುತ್ತಿರುವುದರ' ಆರಂಭಿಕ ಸೂಚನೆ ಎಂದು ಹೇಳಿದ್ದಾರೆ.
1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೇರೆ ಬೇರೆ ಹೈಕೋರ್ಟ್‌ಗಳ ಕನಿಷ್ಠ 16 ನ್ಯಾಯಮೂರ್ತಿಗಳನ್ನು ಕಾರ್ಯಾಂಗವು ವರ್ಗಾವಣೆ ಮಾಡಿತ್ತು.
ತಮಗೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದ್ದಾರೆ. ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಮತ್ತು ವಕೀಲರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 'ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಸರಿಸುಮಾರು 48 ವರ್ಷಗಳ ನಂತರದಲ್ಲಿ 24 ಜನ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿದೆ' ಎಂದು ಅವರು ಹೇಳಿದರು.
ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಪೈಕಿ ಮೂರನೆಯ ಒಂದರಷ್ಟು ಮಂದಿ ಆ ರಾಜ್ಯದ ಹೊರಗಿನವರಾಗಿರಬೇಕು ಎಂದು 1983ರಲ್ಲಿ ಕೇಂದ್ರ ಸರ್ಕಾರವು ತೀರ್ಮಾನಿಸಿತು ಎಂದು ಹೇಳಿದ ಚೌಧುರಿ, 'ನಮ್ಮ ವರ್ಗಾವಣೆಯು ಆ ನೀತಿಯ ಅನುಷ್ಠಾನದ ಆರಂಭ ಎಂದು ಭಾವಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.