ತಿರುವನಂತಪುರಂ: ಕಂದಲ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಹಾಗೂ ಸಿಪಿಐ ಮುಖಂಡ ಎನ್ ಭಾಸುರಾಂಗನ್ ಅವರ ಪುತ್ರ ಅಖಿಲ್ ಜಿತ್ ನನ್ನು ಇಡಿ ಬಂಧಿಸಿದೆ.
ಅವರ ಐμÁರಾಮಿ ಕಾರನ್ನು ಕೂಡ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ನಿನ್ನೆಯ ವಿಚಾರಣೆ ಬಳಿಕ ಇಡಿ ಅಧಿಕಾರಿಗಳ ವಾಹನದಲ್ಲಿ ಅಖಿಲ್‍ಜಿತ್‍ನನ್ನು ಕರೆದೊಯ್ಯಲಾಯಿತು. ಕೋಟ್ಯಂತರ ರೂಪಾಯಿ ಠೇವಣಿ ಇಟ್ಟವರ ದಾಖಲೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಇಡಿ ಕಂದಾಲ ಬ್ಯಾಂಕ್ ಹಾಗೂ ಭಾಸುರಾಂಗನ ಮನೆ ಪರಿಶೀಲನೆ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮುಂಜಾನೆಯಿಂದ ವಿವಿಧೆಡೆ ಆರಂಭವಾದ ದಾಳಿ ನಿನ್ನೆ ರಾತ್ರಿ ಮುಕ್ತಾಯಗೊಂಡಿತ್ತು. ಮೊನ್ನೆ ಪೂಜಾಪುರದ ಭಾಸುರಾಂಗನ ಮನೆಯಲ್ಲಿ ತಪಾಸಣೆ ನಡೆಸಲಾಗಿತ್ತು. ಮನೆಯಲ್ಲಿ ವಿಚಾರಣೆ ವೇಳೆ ಅಸ್ವಸ್ಥರಾಗಿದ್ದ ಭಾಸುರಾಂಗನ್ ಅವರನ್ನು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಶೀಘ್ರ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ವರ್ಗಾಯಿಸುವಂತೆ ಭಾಸುರಾಂಗನ್ ಆಗ್ರಹಿಸಿದ್ದಾರೆ. ಇಡಿ ಅವರನ್ನು ಕಿಮ್ಸ್‍ಗೆ ಕರೆದುಕೊಂಡು ಹೋಗಿತ್ತು. ಇಡಿ ಮತ್ತು ಅಧಿಕಾರಿಗಳು ಆಸ್ಪತ್ರೆಯಲ್ಲಿಯೇ ಇದ್ದಾರೆ.
30 ವರ್ಷಗಳಿಂದ ಸಿಪಿಐ ನಾಯಕ ಭಾಸುರಾಂಗನ್ ಅಧ್ಯಕ್ಷರಾಗಿದ್ದ ಆಡಳಿತ ಮಂಡಳಿ ವಿರುದ್ಧ 101 ಕೋಟಿ ರೂ.ಗಳ ಆರ್ಥಿಕ ದುರ್ಬಳಕೆ ಆರೋಪ ಕೇಳಿಬಂದಿದೆ.