ಕಾಸರಗೋಡು: ಜಿಲ್ಲಾ ಪಂಚಾಯಿತಿ ಹಾಗೂ ಯುವಜನ ಕಲ್ಯಾಣ ಮಂಡಳಿ ವತಿಯಿಂದ ಆಯೋಜಿಸಿರುವ ಜಿಲ್ಲಾ ಕೇರಳೋತ್ಸವ ಕಲಾ ಸ್ಪರ್ಧೆಗಳು ಪಿಲಿಕೋಡಿನ ಸಿಕೆಎನ್‍ಎಸ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಗೊಂಡಿತು. ಎರಡು ದಿನಗಳ ಕಲಾ ಸ್ಪರ್ಧೆಯಲ್ಲಿ ಮೊದಲ ದಿನ ವೇದಿಕೆಯೇತರ ಸ್ಪರ್ಧೆ ನಡೆಯಿತು.
ಚಿತ್ರನಟ ಪಿ.ಪಿ.ಕುಞÂಕೃಷ್ಣನ್ ಕೇರಳೋತ್ಸವವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ, ನೀಲೇಶ್ವರ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಪಿ.ಕೆ.ಲಕ್ಷ್ಮಿ, ಜಿಲ್ಲಾ ಯುವ ಕಾರ್ಯಕ್ರಮ ಅಧಿಕಾರಿ ಪಿ.ಸಿ.ಶಿಲಾಸ್, ನೀಲೇಶ್ವರ ಬ್ಲಾಕ್ ಯುವ ಸಮನ್ವಯಾಧಿಕಾರಿ ವೈಶಾಖ್ ಕೊಡಕ್ಕಾಡ್, ಪಿಲಿಕೋಡ್ ಶಾಲೆಯ ಪ್ರಾಂಶುಪಾಲೆ ರತ್ನಾವತಿ, ಜಿಲ್ಲಾ ಯುವ ಸಮನ್ವಯಾಧಿಕಾರಿ ಎ.ವಿ.ಶಿವಪ್ರಸಾದ್, ಜನಪ್ರತಿನಿಧಿಗಳಾದ ವಿ.ವಿ.ಸುಲೋಚನಾ, ವಿ.ವಿ.ಸುಜಾತ, ಕೆ.ವಿ.ವಿಜಯನ್, ವಿ.ಪ್ರದೀಪ್, ಏಷ್ಯಾನೆಟ್‍ಮುನ್ಷಿಯ ಫಯೀಮ್ ಬಿಜು ಇರಿನಾವ್ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮನು ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಪಿ.ಕೆ.ಸಜೀವ್ ವಂದಿಸಿದರು.
ಮೂರು ನಗರಸಭೆ ಮತ್ತು ಆರು ಬ್ಲಾಕ್‍ಗಳಿಂದ ಆಯ್ಕೆಯಾದ ಸುಮಾರು 3500 ಕಲಾ ಪ್ರತಿಭೆಗಳು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು 66 ಐಟಂಗಳಲ್ಲಿ 24 ರಾಷ್ಟ್ರೀಯ ಯುವ ಉತ್ಸವಕ್ಕೆ ಅರ್ಹತೆ ಪಡೆದುಕೊಳ್ಳಲಿದೆ.