ಪೆರ್ಲ: ಬಿಎಡ್ ವ್ಯಾಸಂಗ ನಿರತನಾಗಿದ್ದ ವಿದ್ಯಾರ್ಥಿಯೋರ್ವ ಡೆತ್ ನೋಟ್ ಬರೆದಿಟ್ಟು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆಗೈದ ಘಟನೆ ಎಣ್ಮಕಜೆ ಗ್ರಾಮ ಪಂಚಾಯತಿನ ಪಜ್ಜಾನ ಎಂಬಲ್ಲಿ ನಡೆದಿದೆ.
ಇಲ್ಲಿನ ಬಡಗಿ ವೃತ್ತಿ ನಿರ್ವಹಿಸುವ ಸಿಲ್ವೆಸ್ಟರ್ ಕ್ರಾಸ್ತಾ ಎಂಬವರ ಪುತ್ರ ಐವನ್ ಕ್ರಾಸ್ತ (23) ಎಂಬ ಯುವಕನ ಮೃತದೇಹ ನ.7ರಂದು ಸಂಜೆ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ತೊಕ್ಕೊಟಿನ ಕಾಲೇಜುವೊಂದರಲ್ಲಿ ಬಿಎಡ್ ವಿದ್ಯಾರ್ಥಿಯಾಗಿರುವ ಈತ ಕಳೆದ ಕೆಲವು ದಿನಗಳಿಂದ ಖಿನ್ನತೆಗೊಳಗಿದ್ದಂತೆ ಕಂಡು ಬರುತ್ತಿದ್ದು ನ.6ರಂದು ರಾತ್ರಿ ಊಟ ಮಾಡಿ ಮಲಗಿದ್ದ. ಮರುದಿನ ನ.7ರಿಂದ ಬೆಳಗ್ಗೆ ಈತ ನಾಪತ್ತೆಯಾಗಿದ್ದು ಬೆಳಗ್ಗೆಯೇ ಎದ್ದು ಕಾಲೇಜಿಗೆ ಹೋಗಿರಬೇಕೆಂದು ಭಾವಿಸಿದ್ದರು. ಸಂಜೆ ಕಾಲೇಜು ಬಿಟ್ಟು ಬಾರದಿರುವಾಗಲೂ ಕಾಣದಿದ್ದು ಮನೆಯವರು ಹುಡುಕಾಡಿದಾಗ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಈತ ಮಲಗುವ ಕೋಣೆಯೊಳಗೆ "ನನ್ನ ಸಾವಿಗೆ ನಾನೇ ಕಾರಣ" ಎಂದು ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದೆ. ಬದಿಯಡ್ಕ ಪೋಲಿಸರು ಪ್ರಕರಣ ದಾಖಲಿಸಿದ್ದು ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪಂಚೆನಾಮೆ ನಡೆಸಿ ನ.8ಕ್ಕೆ (ಇಂದು) ಸಂಜೆ 4 ಗಂಟೆಗೆ ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚಿನಲ್ಲಿ ಸಂಸ್ಕರಿಸಲಾಗುವುದೆಂದು ಮನೆಯವರು ತಿಳಿಸಿದ್ದಾರೆ. ಮೃತರು ತಂದೆ,ತಾಯಿ ನತಾಲಿಯ ಡಿಸೋಜ, ಸಹೋದರ ಮೇಲ್ವಿನ್ ಕ್ರಾಸ್ತ (ಶೇಣಿ ಶಾಲಾ ವಿದ್ಯಾರ್ಥಿ) ಎಂಬವರನ್ನಗಲಿದ್ದಾರೆ.