ಮಂಗಳೂರು: ನಗರದ ಮಾತಾ ಅಮೃತಾನಂದಮಯಿ ಮಠದ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ವತಿಯಿಂದ ಬೋಳೂರಿನ ಅಮೃತ ವಿದ್ಯಾಲಯಂ ಆವರಣದಲ್ಲಿ 2024 ರ ಜನವರಿ ತಿಂಗಳ ದಿನಾಂಕ 13 ರ ಶನಿವಾರ ದ. ಕ., ಕಾಸರಗೋಡು ಮತ್ತು ಉಡುಪಿ ಜಿಲ್ಲಾ ಮಟ್ಟದ ಒಂದು ದಿನದ ಯುವ – ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದ್ದು ಅದರ ಗೋಷ್ಠಿಗಳಲ್ಲಿ ಮಂಡಿಸಲು 28 ವರ್ಷ ವಯಸ್ಸಿಗಿಂತ ಕೆಳಗಿನ ಯುವಕ ಯುವತಿಯರಿಂದ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಆಯ್ಕೆಗಾಗಿ ಮೂರು ನಿಮಿಷಕ್ಕೆ ಮೀರದಂತಹ ಸ್ವರಚಿತ ಕಥೆ, ಕವನ ಮತ್ತು ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.
ಕಥೆ ಕವನಗಳು ಸ್ವತಂತ್ರವಾಗಿದ್ದು ಪ್ರಬಂಧವು ನನ್ನ ಪ್ರವಾಸಾನುಭವ ಎಂಬ ವಿಷಯದ ಬಗ್ಗೆ ಇರಬೇಕಾಗಿದೆ. ಬರಹದೊಂದಿಗೆ ಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆ ನಮೂದಿಸಿ ಡಿಸೆಂಬರ್ 15 ರೊಳಗೆ ತಲಪುವಂತೆ ಕಳಿಸಿ ಕೊಡಬೇಕು. ವಿದ್ಯಾರ್ಥಿಗಳಾದರೆ ಕಾಲೇಜು ಮುಖ್ಯಸ್ಥರ ದೃಢೀಕರಣ ಪತ್ರದೊಂದಿಗೆ ಕಳಿಸಿ ಕೊಡಬೇಕು. ವಿಳಾಸ: ಸಂಯೋಜಕರು, ಯುವ – ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ, ಅಮೃತಾನಂದಮಯಿ ಮಠ, ಬೋಳೂರು, ಮಂಗಳೂರು – 575 003. ದೂರವಾಣಿ: 9448384391 ಮತ್ತು 9980354974.