ಉತ್ತರಕಾಶಿ: ಸಿಲ್ಕ್ಯಾರಾ ಸುರಂಗ ಕುಸಿತದಲ್ಲ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯ 14 ದಿನವಾದರೂ ಮುಂದುವರಿದಿದೆ. ಏನೇ ಆದರೂ ಕ್ರಿಸ್‌ಮಸ್ (ಡಿ.25)ವೇಳೆಗೆ ಕಾರ್ಮಿಕರು ಮನೆಗೆ ಬರುತ್ತಾರೆ ಎಂದು ಭರವಸೆ ನೀಡಿದ್ದೇನೆ ಎಂದು ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಹೇಳಿದ್ದಾರೆ,

ಸಿಲ್ಕ್ಯಾರಾ ಸುರಂಗ ಕೊರೆಯುವ ಆಗರ್ ಯಂತ್ರದ ಬ್ಲೇಡ್‌ಗಳು ಅವಶೇಷಗಳ ಮಧ್ಯೆ ಸಿಲುಕಿಕೊಂಡಿವರ. ಹೀಗಾಗಿ ರಕ್ಷಣಾ ಕಾರ್ಯಚರಣೆ ಅರ್ಧಕ್ಕೆ ನಿಂತಿದೆ.
ಯಂತ್ರ ಹಾಳಾಗಿರುವುದರಿಂದ ತಜ್ಞರು ಕಾರ್ಮಿಕರನ್ನು ತಲುಪಲು ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ. ಉಳಿದ 10 ಅಥವಾ 12 ಮೀಟರ್ ಉದ್ದ ಕಾರ್ಮಿಕರೇ ಸುರಂಗ ಕೊರೆಯುವುದು ಅಥವಾ ಮೇಲ್ಭಾಗದಿಂದ 86 ಮೀಟರ್ ಕೆಳಗೆ ಕೊರೆಯುವುದು ಆಯ್ಕೆಗಳಾಗಿವೆ. ಹಾಗಾಗಿ ಕಾರ್ಯಾಚರಣೆ ಇನ್ನೂ ಹಲವು ದಿನಗಳು ಆಗಬಹುದು.
'ಕಾರ್ಮಿಕರಿಂದಲೇ ಸುರಂಗ ಅಗೆಯುವಂತಹ ಕೆಲಸ ಭಾನುವಾರದಿಂದ ಆರಂಭವಾಗಲಿದೆ. ಅಗರ್ ಯಂತ್ರದ ಬ್ಲೇಡ್‌ಗಳು ಅವಶೇಷಗಳ ಅಡಿ ಸಿಲುಕಿಕೊಂಡಿವೆ. ಬ್ಲೇಡ್‌ಗಳ ಕೆಲ ಭಾಗವನ್ನು ಕತ್ತರಿಸಲಾಗಿದೆ. ಉಳಿದ ಕೆಲಸ ಪೂರ್ಣಗೊಳಿಸಲು ಪ್ಲಾಸ್ಮಾ ಕಟ್ಟರ್ ಅನ್ನು ಹೈದರಾಬಾದ್‌ನಿಂದ ವಿಮಾನದಲ್ಲಿ ತರಲಾಗುತ್ತಿದೆ' ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಆಟದ ವಸ್ತುಗಳ ರವಾನೆ:
ಕಾರ್ಮಿಕರ ಒತ್ತಡ ನಿವಾರಿಸಲು ಮೊಬೈಲ್ ಫೋನ್, ಲೂಡೊ, ಹಾವು-ಏಣಿಗಳಂತಹ ಆಟದ ವಸ್ತುಗಳನ್ನು ರವಾನಿಸಲಾಗಿದೆ. ಕಾರ್ಮಿಕರು ವಿಡಿಯೊ ಗೇಮ್ ಆಡಲು ಮೊಬೈಲ್ ಫೋನ್ ನೀಡಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.