ಕುಂಬಳೆ: ಗ್ರಾಮೀಣ ಸೊಬಗು, ಧಾರ್ಮಿಕ ಸೌಹಾರ್ದತೆ ಮೆರೆವ ಪೇರಾಲ್‍ನಲ್ಲಿ ಉಪಜಿಲ್ಲಾ ಕಲಾ ಉತ್ಸವವನ್ನು ನಡೆಸಲು ಆಸಕ್ತಿ ವಹಿಸಿದ ಕಿರಿಯ ಪ್ರಾಥಮಿಕ ಶಾಲೆ, ಇಲ್ಲಿಯ ಪಿಟಿಎಯ ಧೈರ್ಯ ವಿಶಿಷ್ಟವಾದುದು. ಸ್ಥಳೀಯರು ತೋರಿದ ಸೌಹಾರ್ದ ಮನೋಭಾವನೆ ಮತ್ತು ಪ್ರಯತ್ನ ಅನುಕರಣೀಯ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದರು.
ಪೇರಾಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಮೂರನೇ ದಿನವಾದ ಗುರುವಾರ ಮಧ್ಯಾಹ್ನ ಅಧಿಕೃತ ಉದ್ಘಾಟನೆ ನಿರ್ವಹಿಸಿ ಅವರು ಮಾತನಾಡಿದರು.
ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಎಂ ಕಲೋತ್ಸವ ವಿಷಯ ಮಂಡಿಸಿದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ.ಎಸ್., ಕುಂಬಳೆ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಹ್ಮಾನ್ ಆರಿಕ್ಕಾಡಿ, ಸಬೂರ, ಆಯೆಶತ್ ನಸೀಮಾ, ಗ್ರಾ.ಪಂ. ಸದಸ್ಯೆ ತಾಹಿರಾ ಶಂಸೀರ್, ಜಯದೇವ ಕಣಿಗೆ, ವಿಷ್ಣುಪಾಲನ್, ಪಿಟಿಎ. ಅಧ್ಯಕ್ಷ ಮುಹಮ್ಮದ್ ಬಿ.ಎ.ಪೇರಾಲ್, ಸೈಯದ್ ಹಾದಿ ತಂಙಳ್ ಮೊಗ್ರಾಲ್, ಎ.ಟಿ.ಎಂ.ಶುಹೈಬ್, ಅಬೂಬಕರ್ ಲ್ಯಾಂಡ್ ಮಾರ್ಕ್, ಎ.ಎಂ.ಸಿದ್ದೀಕ್ ರಹಮಾನ್, ರಿಯಾಜ್ ಮೊಗ್ರಾಲ್, ಎಂ.ಜಿ.ಎ.ರಹಮಾನ್, ಫಝಲ್ ಪೇರಾಲ್, ಎಂ.ಪಿ.ಮೊಯ್ತೀನ್, ಕೃಷ್ಣ ಪೇರಾಲ್, ಅರ್ಜುನ್ ಪೇರಾಲ್, ಹ್ಯಾರಿಸ್ ಪೇರಾಲ್, ಅಬ್ದುಲ್ ರೆಹಮಾನ್ ಪೇರಾಲ್, ವಿಜಯಕುಮಾರ್ ಉಪಸ್ಥಿತರಿದ್ದು ಶುಭಹಾರೈಸಿದರು. ಸಂಘಟನಾ ಸಮಿತಿಯ ಪ್ರಧಾನ ಸಂಚಾಲಕ ಶ್ರೀಹರ್ಷ ಸ್ವಾಗತಿಸಿ, ಮುಹಮ್ಮದ್ ಶಿಹಾಬ್ ಎ. ವಂದಿಸಿದರು.