ತಿರುವನಂತಪುರಂ: ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲಿರುವ ದಿವ್ಯಾಂಗ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿಯೊಂದನ್ನು ಇಲಾಖೆ ಪ್ರಕಟಿಸಿದೆ. ಅಂಗವೈಕಲ್ಯವನ್ನು ಸಾಬೀತುಪಡಿಸುವ ದಾಖಲೆ ಇದ್ದರೆ ಪರೀಕ್ಷಾ ಸವಲತ್ತು ನೀಡಲು ಹೊಸ ಪ್ರಮಾಣಪತ್ರವನ್ನು ಕೇಳದಂತೆ ರಾಜ್ಯ ಅಂಗವಿಕಲ ಆಯುಕ್ತರು ಸೂಚನೆ ನೀಡಿದ್ದಾರೆ. ಸಾರ್ವಜನಿಕ ಶಿಕ್ಷಣ ನಿರ್ದೇಶನಾಲಯಕ್ಕೆ ಆದೇಶ ನೀಡಲಾಗಿದೆ.
ಅಂಗವಿಕಲರ ಹಕ್ಕು ಕಾಯಿದೆಯ ಸೆಕ್ಷನ್ 58ರ ಪ್ರಕಾರ, ಅಂಗವಿಕಲ ಪ್ರಮಾಣಪತ್ರ ಅಥವಾ ಯುಡಿಐಡಿ ಕಾರ್ಡ್ ಹೊಂದಿರುವ ದೈಹಿಕ, ಮಾನಸಿಕ ಮತ್ತು ಬೌದ್ಧಿಕವಾಗಿ ವಿಕಲಾಂಗ ವ್ಯಕ್ತಿಗಳಿಗೆ ಆದೇಶ ಅನ್ವಯಿಸುತ್ತದೆ ಎಂದು ಆಯುಕ್ತ ಎಸ್.ಎಚ್.ಪಂಚಾಪಕೇಶನ್ ಮಾಹಿತಿ ನೀಡಿದ್ದಾರೆ.