ಪೆರ್ಲ: ಕಾಸರಗೋಡು ಜಿಲ್ಲೆಯ ಮಕ್ಕಳ ರಂಗಭೂಮಿಗೆ ಕ್ರಿಯಾಶೀಲತೆಯನ್ನು ನೀಡುವ ನಿಟ್ಟಿನಲ್ಲಿ ರಂಗ ಡಿಂಡಿಮ ಪೆರ್ಲ ಎಂಬ ಸಂಘಟನೆಯನ್ನು ರೂಪೀಕರಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಕ್ಕಳ ರಂಗೋತ್ಸವ, ನಾಟಕೋತ್ಸವ, ರಂಗ ಶಿಬಿರದ ಜತೆಗೆ ಕನ್ನಡ ಭಾಷಾ ಅಭಿವೃದ್ಧಿಯನ್ನು ಉದ್ದೇಶವಾಗಿರಿಸಿ ಅಸ್ತಿತ್ವಕ್ಕೆ ಬಂದ ರಂಗ ಡಿಂಡಿಮದ ಅಧ್ಯಕ್ಷರಾಗಿ ರಾಜೇಶ್ ಬಜಕೂಡ್ಲು, ಸಾವಿತ್ರಿ ಕನ್ನಟಿಕಾನ (ಉಪಾಧ್ಯಕ್ಷೆ),ಸದಾನಂದ ಸೂರ್ಡೇಲು (ಪ್ರ.ಕಾರ್ಯದರ್ಶಿ),ಮಮತ ನಲ್ಕ (ಜತೆ ಕಾರ್ಯದರ್ಶಿ),ಮೋಹನ್ ಪೆರ್ಲ (ಕೋಶಾಧಿಕಾರಿ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದೇವಕಿ ಬಜಕೂಡ್ಲು, ಶಶಿಕಲಾ ನಲ್ಕ, ಸಹನಾ ಪೆರ್ಲ, ಭವ್ಯಶ್ರೀ ಬಿ ವರ್ಮುಡಿ, ಚಂದ್ರ ಪೆರ್ಲ, ಮಂಜು ಪೆರ್ಲ, ನಾರಾಯಣ ನಾಯಕ್ ನಲ್ಕ ಆಯ್ಕೆಯಾದರು. ಸಮಿತಿ ನಿರ್ದೇಶಕರಾಗಿ ಉದಯ ಸಾರಂಗ್, ಕೃಷ್ಣಪ್ಪ ಬಂಬಿಲ, ಸಂಚಾಲಕರಾಗಿ ಜಯ ಮಣಿಯಂಪಾರೆ ಅವರನ್ನು ಆಯ್ಕೆ ಮಾಡಲಾಯಿತು.