ತಿರುವನಂತಪುರಂ: ರಾಜ್ಯದಲ್ಲಿ ವಿದ್ಯುತ್ ಶುಲ್ಕ ಹೆಚ್ಚಿಸಿದ ಬೆನ್ನಲ್ಲೇ ಇದೀಗ ಕುಡಿಯುವ ನೀರಿನ ಬೆಲೆಯನ್ನೂ ಹೆಚ್ಚಳಗೊಳಿಸಿ ಕಿಸೆಗೆ ಕತ್ತರಿ ಇರಿಸಲಾಗಿದೆ. ಏಪ್ರಿಲ್ 1ರಿಂದ ಶೇ.5ರಷ್ಟು ದರ ಏರಿಕೆಯಾಗಲಿದೆ ಎಂದು ವರದಿಯಾಗಿದ್ದು, ಈ ಬಗ್ಗೆ ಜಲ ಪ್ರಾಧಿಕಾರ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.
ಈ ವರ್ಷದ ಆರಂಭದಲ್ಲಿ ನೀರಿನ ದರ ಲೀಟರ್‍ಗೆ ಒಂದು ಪೈಸೆ ಹೆಚ್ಚಿಸಲಾಗಿತ್ತು. ಪ್ರತಿ ಲೀಟರ್‍ಗೆ ಒಂದು ಪೈಸೆ ಸೇರಿಸಿದರೆ 1000 ಲೀಟರ್‍ಗೆ ಹತ್ತು ರೂಪಾಯಿ ಹೆಚ್ಚಳವಾಗಲಿದೆ. ಪ್ರಸ್ತುತ, 5000 ಲೀಟರ್‍ವರೆಗಿನ ಮನೆಯ ಬಳಕೆಗೆ ಕನಿಷ್ಠ ಶುಲ್ಕ 22.05 ರೂ.ರಷ್ಟಿದೆ. ಈ ಪೈಕಿ ಒಂದೇ ಬಾರಿಗೆ ಸುಮಾರು 72 ರೂಪಾಯಿ ಏರಿಕೆಯಾಗಲಿದೆ.
ನಿನ್ನೆ ವಿದ್ಯುತ್ ದರವನ್ನು ಹೆಚ್ಚಿಸಿದ ನಂತರ ನೀರಿನ ದರವನ್ನೂ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ಯೂನಿಟ್‍ಗೆ ಸರಾಸರಿ 20 ಪೈಸೆ ಹೆಚ್ಚಳವಾಗಲಿದೆ. ತಿಂಗಳಿಗೆ 40 ಯೂನಿಟ್‍ಗಿಂತ ಕಡಿಮೆ ಇರುವವರಿಗೆ ದರ ಹೆಚ್ಚಳ ಅನ್ವಯಿಸುವುದಿಲ್ಲ. 100 ಯೂನಿಟ್‍ಗಳನ್ನು ಬಳಸುವವರು 20 ಪ್ರತಿಶತದಷ್ಟು ದರವನ್ನು ಹೆಚ್ಚಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳಿಗೆ ದರ ಏರಿಕೆ ಅನ್ವಯವಾಗಲಿದೆ.
ಪ್ರತಿ ವರ್ಷ ವಿದ್ಯುತ್ ದರ ಏರಿಕೆಯಾಗುತ್ತಿದ್ದು, ಜನರು ಇದಕ್ಕೆ ಸಿದ್ಧರಾಗಬೇಕು ಎಂದು ಸಚಿವ ಕೆ. ಕೃಷ್ಣನ್ ಕುಟ್ಟಿ ಹೇಳಿರುವರು. ದರ ಹೆಚ್ಚಿಸದೆ ಬೇರೆ ದಾರಿ ಇಲ್ಲ ಎಂದು ಸಚಿವರು ಹೇಳಿರುವರು.