ಪೆರ್ಲ ; ಎಣ್ಮಕಜೆ ಗ್ರಾಮ ಪಂಚಾಯತಿ ಶೇಣಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯನ್ನು ನಡೆಸಲಾಯಿತು. ಇದರ ಅಂಗವಾಗಿ ನಡೆದ ಸಭೆಯನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಅಂಗನವಾಡಿ ಅಭಿವೃದ್ಧಿ ಸಮಿತಿ ಎಂ.ಎ.ಅಬ್ದುಲ್ ಖಾದರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.ನೆಜಿಬ್ ಶೇಣಿ,ಮುಹಮ್ಮದ್ ಉಪಸ್ಥಿತರಿದ್ದರು. ಬಳಿಕ ಮಕ್ಕಳಿಗೆ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ, ಮೆರವಣಿಗೆ ನಡೆಯಿತು. ಅಂಗನವಾಡಿ ಅಧ್ಯಾಪಕಿ ಕಮಲ ಸ್ವಾಗತಿಸಿ, ಸುಮ ವಂದಿಸಿದರು.