ನವದೆಹಲಿ : ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗಾಗಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಶನಿವಾರ ತಮ್ಮ ಐದು ದಿನದ ಬ್ರಿಟನ್ ಪ್ರವಾಸ ಆರಂಭಿಸಿದರು.
ನವದೆಹಲಿ : ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗಾಗಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಶನಿವಾರ ತಮ್ಮ ಐದು ದಿನದ ಬ್ರಿಟನ್ ಪ್ರವಾಸ ಆರಂಭಿಸಿದರು.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮುಂದಿನ ಕೆಲವು ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಲಂಡನ್‌ನಲ್ಲಿ ನಡೆಯುವ ಮಾತುಕತೆಯಲ್ಲಿ ಪ್ರಧಾನಿ ಪ್ರವಾಸದ ಸಿದ್ಧತೆಗಳ ಬಗ್ಗೆಯೂ ಚರ್ಚೆಯಾಗಲಿದೆ.
'ವಿದೇಶಾಂಗ ಸಚಿವ ಎಸ್.ಜೈಶಂಕರ್ ಇದೇ 15ರವರೆಗೆ ಬ್ರಿಟನ್‌ನಲ್ಲಿ ಇರಲಿದ್ದಾರೆ. ಈ ಸಂದರ್ಭ ತಮ್ಮ ಸಹವರ್ತಿ ಜೇಮ್ಸ್ ಕ್ಲಿವರ್ಲಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ' ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
'ಭಾರತ- ಬ್ರಿಟನ್ ಮಾರ್ಗಸೂಚಿ 2030'ರೊಂದಿಗೆ, ಭಾರತ- ಬ್ರಿಟನ್ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ 2021ರಲ್ಲೇ ಆರಂಭಗೊಂಡಿದೆ. ಇದು ವಿವಿಧ ಕ್ಷೇತ್ರಗಳಲ್ಲಿನ ಬಾಂಧವ್ಯವನ್ನು ವಿಸ್ತರಿಸಲು ಯತ್ನಿಸುತ್ತಿರುತ್ತದೆ. ಈ ಮಾರ್ಗಸೂಚಿಯು ಎರಡೂ ದೇಶಗಳ ಪಾಲುದಾರಿಕೆಗೆ ಹಾಗೂ ಸ್ನೇಹಕ್ಕೆ ಬದ್ಧವಾಗಿದೆ ಎಂದಿದೆ.