ಕೊಟ್ಟಾಯಂ: ಇಲ್ಲಿಗೆ ಸಮೀಪದ ಮೀನಾದಂನಲ್ಲಿರುವ ತಮ್ಮ ನಿವಾಸದ ಸಮೀಪವಿರುವ ಜನವಸತಿ ಇಲ್ಲದ ಮನೆಯೊಂದರ ಶೆಡ್‌ನಲ್ಲಿ ಭಾನುವಾರ ತಂದೆ ಮತ್ತು ಅವರ ಎಂಟು ವರ್ಷದ ಮಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೀನಾದಂ ನಿವಾಸಿಗಳಾದ ಬಿನು ಕುಮಾರ್ (48) ಮತ್ತು ಅವರ ಮಗ ಶ್ರೀಹರಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೆಡ್‌ನಲ್ಲಿ ನೇಣು ಬಿಗಿದುಕೊಂಡಿರುವುದನ್ನು ಕಂಡ ಸ್ಥಳೀಯರು, ಅಕ್ಕಪಕ್ಕದ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅವರು ಬೆಳಗಿನ ವಾಕಿಂಗ್‌ಗೆ ಹೋಗುತ್ತಿದ್ದರು. ಭಾನುವಾರ ಬೆಳಗ್ಗೆಯೂ ಅನೇಕ ಜನರು ಅವರನ್ನು ನೋಡಿದ್ದಾರೆ. ನಾವು ಘಟನೆಯ ಹಿಂದಿನ ಕಾರಣ ಏನೆಂಬುದನ್ನು ತನಿಖೆ ಮಾಡುತ್ತಿದ್ದೇವೆ' ಎಂದು ಪೊಲೀಸರು ತಿಳಿಸಿದ್ದಾರೆ.
ಕುಮಾರ್ ಅವರಿಗೆ ತಂದೆ-ತಾಯಿ, ಪತ್ನಿ ಹಾಗೂ ಓರ್ವ ಪುತ್ರಿ ಇದ್ದಾರೆ.