ತ್ರಿಶೂರ್: ಶಬರಿಮಲೆ ನಿಯೋಜಿತ ಮೇಲ್ಶಾಂತಿ ಪುತಿಲ್ಲಾತ್ ಮಹೇಶ್ ನಂಬೂದಿರಿ ಅವರು ವಿಧಿವಿಧಾನಗಳನ್ನು ಪೂರೈಸಿ ಶಬರಿಮಲೆಗೆ ತೆರಳಿದರು.
ಪರಮೆಕ್ಕಾವ್ ದೇವಸ್ಥಾನದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಧೀಕ್ಷೆ ಪಡೆದರು. ಕ್ಷೇತ್ರ ತಂತ್ರಿ ಪುಲಿಯನ್ನೂರು ಕೃಷ್ಣನ್ ನಂಬೂದಿರಿ, ಮೇಲ್ಶಾಂತಿ ವಡಕ್ಕೆಡತ್ ವಾಸುದೇವನ್ ನಂಬೂದಿರಿ, ಪುತಿಲ್ಲಾತ್ ಮಧು ನಂಬೂದಿರಿ ಮತ್ತಿತರರು ಭಾಗವಹಿಸಿದ್ದರು.
ದೀಪಾರಾಧನೆಯ ನಂತರ ಕೇತುನೀರ(ವಿಶೇಷ ಮಾಲಧಾರಣೆ) ನಡೆಯಿತು. ಪರಮೆಕ್ಕಾವ್ ದೇವಸ್ವಂ ಅಧಿಕಾರಿಗಳು ಹಾಗೂ ಭಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇಂದು ಸಂಜೆ ವೇಳೆಗೆ ಶಬರಿಮಲೆ ತಲುಪಲಿದ್ದಾರೆ. ಗುರುವಾರ ರಾತ್ರಿ ಪೂಜೆಯ ನಂತರ ಮೇಲ್ಶಾಂತಿ ಪಟ್ಟ ಸ್ವೀಕರಿಸಲಿದ್ದಾರೆ.