ಕಾಸರಗೋಡು: ರೈಲು ನಿಲ್ದಾಣ ರಸ್ತೆಯಲ್ಲಿ ರಸ್ತೆ ಅಭಿವೃದ್ಧಿಯ ಅಂಗವಾಗಿ ಮಡೋನಾ ಕಾನ್ವೆಂಟ್‍ನಿಂದ ರೈಲು ನಿಲ್ದಾಣದವರೆಗೆ ರಸ್ತೆಯ ಎರಡೂ ಪಾಶ್ರ್ವದ ಮರಗಳನ್ನು ಕಡಿದುರುಳಿಸುವ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ ಮುಂದಿನ ಸೂಚನೆಯವರೆಗೆ ಈ ಪ್ರದೇಶಗಳಲ್ಲಿ ರಸ್ತೆ ಅಮಚಿಗೆ ವಾಹನಗಳ ನಿಲುಗಡೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.